ಒಬ್ಬನಿಗೆ ನೂರು ರೂಪಾಯಿ ಟಿಕೆಟಿಗೆ ಲಾಟರಿ ಬಹುಮಾನ ೧೦ ಲಕ್ಷ ರೂಪಾಯಿ ಬಂತು. ಮಾರಾಟಗಾರ ಟ್ಯಾಕ್ಸ್ ಕಟ್ ಮಾಡಿ ಬಾಕಿ ಮೊತ್ತವನ್ನು ಅವನ ಕೈಗೆ ಕೊಡಲು ಮುಂದಾದ. “ಇದರಲ್ಲಿ ಟ್ಯಾಕ್ಸ್ ಕಟ್ ಆಗಿ ಬಾಕಿಮೊತ್ತ ಇದೆ.” ಎಂದ. “ನೋಡಿ, ಫುಲ್ ೧೦ ಲಕ್ಷ ಬಂದಿರುವ ಬಹುಮಾನವನ್ನು ನನಗೆ ಈಗಿಂದೀಗಲೇ ಕೊಡಿ. ಇಲ್ಲವಾದಲ್ಲಿ ನನ್ನ ಟಿಕೆಟ್ ಹಣ ನೂರು ರೂಪಾಯಿ ವಾಪಸ್ ಮಾಡಿ.” ದಬಾಯಿಸಿದ ಆತ!
***
ಮುಖ್ಯಬೀದಿಯಲ್ಲಿ `ಮಹಿಳಾ ಹೆರಿಗೆ ಆಸ್ಪತ್ರೆ’ ಎಂಬ ಬೋರ್ಡನ್ನು ಮಲ್ಲು ಗಮನಿಸಿದ. ಅವನಿಗೆ ಚೋದ್ಯವೆನಿಸಿತು. ಡಾಕ್ಟರ್ ಆಸ್ಪತ್ರೆಯ ಬಾಗಿಲಲ್ಲೇನಿಂತಿದ್ದರು. “ಸಾರ್ , ಇಲ್ಲಿ `ಪುರುಷರ ಹೆರಿಗೆ ಆಸ್ಪತ್ರೆ’ ಎಲ್ಲಿದೆ ಕೊಂಚ ತಿಳಿಸುತ್ತೀರಾ?” ಕೇಳಿದ. “ಎಲ್ಲಾದರೂ ಉಂಟೇನಯ್ಯಾ ಪುರುಷರ ಹೆರಿಗೆ ಆಸ್ಪತ್ರೆ?” ಮತ್ತೆ `ಮಹಿಳೆಯರ ಹೆರಿಗೆ ಆಸ್ಪತ್ರೆ’ ಅಂತ ದೊಡ್ಡದಾಗಿ ಬರೆಸಿದ ಬೋರ್ಡು ಇದೆ?” ತಿರುಗುಬಾಣ ಬಿಟ್ಟ ಮಲ್ಲು!
***
ಈ ಮನೆಯ ಯಜಮಾನ ನಾನೇ ಎಂದು ಹೇಳುವ ಗಂಡನನ್ನು ನಾವು ನಂಬಲೇ ಬೇಕು; ಏಕೆಂದರೆ ಆತ ಇದಕ್ಕಿಂತ ಅತಿದೊಡ್ಡ ಸುಳ್ಳು ಹೇಳಲಾರ!