ಮನೆ ಮನೆ ಮದ್ದು ಕರಿಬೇವು 

ಕರಿಬೇವು 

0

 ನೀರಾವರಿ :

    ಸಸ್ಯಗಳ ಬೆಳವಣಿಗೆಯನ್ನು ಮೊದಲು ಹಂತದಲ್ಲಿ ಪ್ರತಿದಿನ ನೀರಿನ ಅವಶ್ಯಕತೆ ಇದೆ. ಗಿಡ ಬೆಳೆದಂತೆ ನೀರಿನ ಅಗತ್ಯ ಹೆಚ್ಚಾಗಿರುವುದರಿಂದ ಪಾತಿಯನ್ನು ದೊಡ್ಡದು ಮಾಡಿ ನೀರು ಕೊಡಬೇಕು ಬೇಸಿಗೆಯಲ್ಲಿ ನೀರಿನ ಅಗತ್ಯ ಹೆಚ್ಚಾಗಿರುವುದರಿಂದ ವಾರಕ್ಕೊಮ್ಮೆ ಮತ್ತು ಇತರ ದಿನಗಳಲ್ಲಿ 15 ದಿನಗಳಿಗೊಮ್ಮೆ ನೀರು ಹಾಯಿಸಬೇಕು.

Join Our Whatsapp Group

 ಕೀಟ ಮತ್ತು ರೋಗಗಳು :

         ಕಾಂಡ ಕೊರೆಯುವ ಹುಳುವಿನ ಬಾಧೆ ಕಂಡುಬರುತ್ತದೆ ಇದರಲ್ಲಿ ಉಪದ್ರವಕಾರಿ ರೋಗಿಗಳು ವರದಿಯಾಗಿಲ್ಲ ಕಂಡ ಕೊರಕವು ರಾತ್ರಿ ಕಾಂಡ ಕೊರೆದು  ಕಾಂಡದ ಒಳಗೇ ಉಳಿದು ಹಾನಿಮಾಡುತ್ತದೆ.  ಅಂತಹ ಕಾಂಡಗಳ ಮೇಲೆ ಚಾಲರಿಯಂತೆ ಬಲೆ ಕಂಡಾಗ ಹುಳುಗಳನ್ನು ತೆಗೆದು ನಾಶ ಮಾಡಬೇಕು.

 ಕೊಯ್ಲು ಮತ್ತು ಇಳುವರಿ :

       ಸಸಿಗಳನ್ನು ನಾಟಿ ಮಾಡಿದ 4-5 ದಿನಗಳಲ್ಲಿ ಸೊಪ್ಪನ್ನು ಪಡೆಯಬಹುದು. ಬಲಿತ ಸೊಪ್ಪನ್ನು ಕೊಯ್ಲು ಮಾಡಿದರೆ ಪರಿಮಳ ಮತ್ತು ಗುಣಮಟ್ಟ ಚೆನ್ನಾಗಿರುತ್ತದೆ ಸೊಪ್ಪನ್ನು ಒಣಗಿಸಿ ಜೋಪಾನ ಮಾಡುಬವುದು.ಸತ್ಯದ ಅವಧಿ 25 – 30 ವರ್ಷಗಳಿದ್ದು ಸತತವಾಗಿ ಸೊಪ್ಪು ಸಿಗುತ್ತದೆ.. ಪ್ರತಿವರ್ಷ ಒಂದು ಗಿಡದಿಂದ ಸರಾಸರಿ 15- 20 ಕೆ.ಜಿ ಸೊಪ್ಪು ದೊರೆಯುತ್ತದೆ.

 ಪೋಷಕಾಂಶಗಳು :

 ತೇವಾಂಶ            64 ಗ್ರಾಂ

 ಪಿಷ್ಟ                    15  ಗ್ರಾಂ

 ಸಾರಜನಕ           6  ಗ್ರಾಂ

 ಕೊಬ್ಬು                1  ಗ್ರಾಂ

 ಸುಣ್ಣಾಂಶ            705 ಮಿ. ಗ್ರಾಂ

 ರಂಚಕ                  60 ಮಿ. ಗ್ರಾಂ

 ಕಬ್ಬಿನ                  4 ಮಿ. ಗ್ರಾಂ

 ‘ಎ’ ಜೀವಸತ್ವ        13.58 ಐಯು

 ಬಿ1 ಜೀವಸತ್ವ        192 ಎಂಸಿಜಿ

 ಬಿ2 ಜೀವಸತ್ವ          192 ಎಂ ಸಿ ಜಿ

 ನಯಾಸಿನ್               3  ಮಿ.ಗ್ರಾಂ 

 ಸಿ ಜೀವಸತ್ವ              4 ಮಿ, ಗ್ರಾಂ

 ಔಷಧಿಗಳ ಗುಣಗಳು :

1. ಜ್ವರವಿರುವ ಸಮಯದಲ್ಲಿ ಕರಿಬೇವಿನ ಎಲೆಗಳ ಕಷಾಯ ಕುಡಿಯುವುದರಿಂದ ದಾಹ, ಉಷ್ಣತೆ ತಗುತ್ತದೆ.

2. ಗರ್ಭಿಣಿಯರಲ್ಲಿ ಅತಿಯಾಗಿ ವಾಂತಿಯಾಗುತ್ತಿದ್ದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಎರಡು ಚಮಚೆ ಕರಿಬೇವಿನ ಸೊಪ್ಪಿನ ರಸಕ್ಕೆ ಒಂದು ಚಮಚೆ ನಿಂಬೆರಸ ಬೆರಸಿ,ಆಗಾಗ ಕುಡಿಯುತ್ತಿರಬೇಕು.

3. ಬೊಜ್ಜನ್ನು ಕರಗಿಸಲು ಬಯಸುವವರು ಪ್ರತಿದಿನ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ತಿನ್ನುವುದು ಒಳ್ಳೆಯದು.

4. ಮಧುಮೇಹದಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ ಕಾಲಿ ಹೊಟ್ಟೆಗೆ 10 ಎಲೆಗಳನ್ನು ಅಗಿದು ತಿನ್ನುವುದು ಒಳ್ಳೆಯದು.

5. ಮೂಲವ್ಯಾದಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ದಿನಕ್ಕೆರಡು ಬಾರಿ ತಿನ್ನುವುದರಿಂದ ಉರಿ ಮತ್ತು ನೋವು ಕಡಿಮೆಯಾಗುವುದಲ್ಲದೇ ಮಲವಿಸರ್ಜನೆಯೂ ಸಲೀಸಾಗಿ ಆಗುತ್ತದೆ .

6. ಕ್ರಿಮಿ ಕೀಟಗಳು ಕಚ್ಚಿದ ಸ್ಥಳಕ್ಕೆ ಕರಿಬೇವಿನ ಹಣ್ಣು ಮತ್ತು ನಿಂಬೆ ಹಣ್ಣಿನ ರಸ ಬೆರೆಸಿ ಹಚ್ಚುವುದರಿಂದ ನವೆ ಮತ್ತು ಉರಿ ನಿವಾರಣೆಯಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಲಿನಲ್ಲಿ ಬೇಯಿಸಿ ಲೇಪಿಸುವುದರಿಂದಲೂ ವಿಷ ನಿವಾರಣೆಯಾಗುತ್ತದಲ್ಲವೇ ಉರಿಯೂ ತಗುತ್ತದೆ.

7. ಆಮ್ಲ ಪಿತ್ತದಿಂದ ಬಳಲುವವರು ಒಂದು ಚಮಚೆ ಕರಿಬೇವಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಬೆರೆಸಿ ಉಪಯೋಗಿಸಬೇಕು.

8. ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಿಗೆ ಹಾಕಿಕೊಳ್ಳುವುದರಲ್ಲಿ ಕಣ್ಣಿನ ಪೊರೆ ಬರದಂತೆ ತಡೆಯಬಹುದು ಮತ್ತು ಕಣ್ಣಿನ ಕಾಂತಿ ಹೆಚ್ಚುತ್ತದೆ ಅಂದರೆ ಕರಿಬೇವಿನ ರಸವನ್ನು ಕಣ್ಣಿಗೆ ಉಪಯೋಗಿಸುವಾಗ ಎಚ್ಚರಿಕೆ ಅಗತ್ಯ ರಸವನ್ನು ತಯಾರಿಸುವಾಗ ಸ್ವಚ್ಛತೆ  ಬಹು ಮುಖ್ಯ

9. ಅಮ್ಮ ಸಂಖ್ಯೆ ಬೇದಿಯಾಗುತ್ತಿದ್ದಲ್ಲಿ ಕರಿಬೇವಿನ ಎಲೆಯ ಕಷಾಯ ಸೇವನೆ ಉತ್ತಮವಾದದು.

10. ರಕ್ತಭೇದಿಯಾಗುತ್ತಿದ್ದಲ್ಲಿ ಕರಿಬೇವಿನ ಎಲೆಯನ್ನು ಚಟ್ನಿ ತಿನ್ನಬೇಕು

11. ಮೂತ್ರಕೋಶದ ತೊಂದರೆ ಬೇರಿನ ಕಷಾಯ ಪರಿಣಾಮಕಾರಿ.

12. ತಲೆ ಕೂದಲು ಉದುರುತ್ತಿದ್ದಲ್ಲಿ ಕರಿಬೇವಿನಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಬಳಸುತ್ತಿದ್ದಲ್ಲಿ ಕೂದಲು ಉದುರುವಿಕೆ ನಿಲ್ಲುವುದಲ್ಲದೆ ಕೂದಲು ಕಪ್ಪಗೆ ಸೊಂಪಾಗಿ ಬೆಳೆಯುತ್ತದೆ.