ಹೊಸದಾಗಿ ಮದುವೆ ಆದ ತರುಣ-
ತರುಣ: “ನನ್ನ ಹೆಂಡತಿಯನ್ನು ಮೆಚ್ಚಿಸೋದು ತುಂಬಾ ಕಷ್ಟ ಕಣಯ್ಯಾ”.
ಸ್ನೇಹಿತ: “ನನಗೇನೂ ಹಾಗೆ ಅನ್ನಿಸುವುದಿಲ್ಲವಲ್ಲ”.
ತರುಣ: “ಹ್ಯಾಗೆ ಹೇಳ್ತೀ?”
ಸ್ನೇಹಿತ: “ಏಕೆಂದರೆ ಆಕೆ ನಿನ್ನನ್ನು ಮದುವೆ ಆಗಿರುವುದರಿಂದ”.
***
ಒಬ್ಬ ದೇವರನ್ನು ಕುರಿತು ತಪನ್ನು ಮಾಡಿದ. ದೇವರು ಪ್ರತ್ಯಕ್ಷನಾದ. `ಏನು ವರ ಬೇಕು ಕೇಳಿಕೋ’ ದೇವರು ನುಡಿದ. “ಪ್ರಭೂ ನನಗೆ ಎರಡು ಹೃದಯಗಳನ್ನು ಕೊಡು. ಇದೇ ನನ್ನ ಬೇಡಿಕೆ.”
“ಅದೇನು ಎರಡು ಹೃದಯಗಳು?” “ದೇವರ ಪ್ರಶ್ನೆ”.
“ಒಂದು ನನ್ನ ಹೆಂಡತಿಗೆ.” ಅಂದ ಭಕ್ತ.
“ಓಹೋ ಇವನು ನನ್ನ ಭಕ್ತ. ಬಹುಶಃ ಎರಡನೇ ಹೃದಯವನ್ನು ನನಗೆ ಅರ್ಪಿಸಲು ಎಂದು ಕಾಣುತ್ತೆ ಎಂದುಕೊಂಡ ಆ ದೇವರು ಆಯ್ತು, “ಎರಡನೇ ಹೃದಯ ನನಗೆ ತಾನೆ?” ಕೇಳಿದ.
ಅದು ನನ್ನ ಆಫೀಸಿನಲ್ಲಿ ಲೇಡಿ ಟೈಪಿಸ್ಟ್ ಇದ್ದಾಳಲ್ಲಾ ಅವಳು ನನ್ನನ್ನು ತುಂಬಾ ಪ್ರೀತಿಸುತ್ತಾಳೆ – ಅವಳಿಗೆ ಎರಡನೇ ಹೃದಯ” ಅಂದ ಭಕ್ತ! ದೇವರು ತಕ್ಷಣವೇ ಮಾಯ!
***
ಇಂದ್ರ: ನಾನು ಈಗ ಭೂಲೋಕಕ್ಕೆ ಹೊರಟಿದ್ದೀನಿ. ನಿನಗೆ ಇಷ್ಟವಾದದ್ದು ಏನು ಬೇಕು ಕೇಳು ನಾನು ತಂದು ಕೂಡುತ್ತೇನೆ ಎಂದ, ಮೇನಕೆಯನ್ನು ಉದ್ದೇಶಿಸಿ.
ಮೇನಕೆ: “ಭೂಲೋಕಕ್ಕೆ ಹೊರಟಿದ್ದೀರಲ್ಲವಾ. ನನಗೆ ವಾಪಸ್ ಬರುವಾಗ “ವಿದ್ಯಾರ್ಥಿ ಭವನ”ದಿಂದ (ಹೋಟೆಲ್) ಎರಡು ಬೆಣ್ಣೆ ಮಸಾಲೆ ಪಾರ್ಸಲ್ ಮಾಡಿಸಿಕೊಂಡು ತನ್ನಿ.”