ಗೆಳೆಯ ತಿಪ್ಪೇಶಿ ಕೇಳಿದ, “ಜಗ್ಗೂ, ಅದೇನು ಒಂದೇ ಏಟಿಗೆ ಆ ಪಕ್ಕದ ಮನೆ ಕನಕನ್ನ ಡವ್ ಹೊಡಿಯೋದು ನಿಲ್ಲಿಸ್ ಬಿಟ್ಟೆ ಅಂತಲ್ಲ…”
ಜುಗ್ಗೇಶಿ ನಿಡುಸುಯ್ಯುತ್ತಾ ನುಡಿದ, “ಹೂಂ, ಆ ಒಂದೇಟು ಅವರ ಅಣ್ಣಂದು ಅದಕ್ಕೆ…..”
***
ಮೋಹನ : ಪರವಾಗಿಲ್ಲಯ್ಯಾ ವಿಶ್ವ ನಿಮ್ಮ ಅತ್ತೆ ಬಾಯಿ ತೆರೆದು ಮಾತಾಡ್ತಾರೆ.
ವಿಶ್ವ : “ಉಳಿದವರು ಹೇಗೆ ನಿಮ್ಮ ಮಾತಾಡ್ತಾರಂತ ನಿನ್ನ ಅಭಿಪ್ರಾಯ ? “ ವಿಶ್ವ ಪ್ರಶ್ನೆಸಿದ.
***
ಅವನು : ನೋಡಪ್ಪ ಇದರಲ್ಲಿರೋ ಕತ್ತೆ ಫೋಟೋ, ನಾಯಿ ಫೋಟೋ, ನರಿ ಫೋಟೋ ಹಾಕಿ ಕೊಡಿ.
ಅಂಗಡಿಯವ : ಯಾಕ್ಸಾರ್ ?
ಅವನು : ಆ ಹೆಂಗಸು ಒಂದೊಂದುಸಲ ನಾಯಿತರ, ನರಿತರ, ಕತ್ತೆ ತರ ಆಡ್ತಾಳೆ, ಅದಕ್ಕೆ.
ಅಂಗಡಿಯವನು : ಅವರು ಯಾರು ಸಾರ್ ?
ಅವನು : ಆ ಹೆಂಗಸು ನಮ್ಮತ್ತೆ.
***
ಶಂಕರ್ :ಮದುವೆಯಾದ ಮೇಲೆ ಹನಿಮೂನಿಗೆ ಎಲ್ಲಿಗೆಹೋಗ್ತೀಯಾ ?
ರಾಘು : ಅದೆಲ್ಲ ಆಗೋಗಿದೆ, ಇನ್ನೇನಿದ್ರೂ ಸಂಸಾರ, ಜಗಳ.