ಶಿಕ್ಷಕ : ಎಲ್ಲದಕ್ಕಿಂತ ಹೆಚ್ಚು ಮತ್ತು (ನಿಶೆ) ಬರುವುದು ಯಾತರಲ್ಲೀ ?
ರಾಜು : ಪುಸ್ತಕದಲ್ಲಿ ಸರ್
ಶಿಕ್ಷಕ : ಅದು ಹೇಗೆ ಹೇಳ್ತೀಯಾ ?
ರಾಜು : ನಾನು ಪುಸ್ತಕ ತೆಗೆದು ಓದೋಕೆ ಕೂರೋದೆ ತಡ ಕಣ್ಣು ಮುಚ್ಚೋ ಹಾಗಾಗುತ್ತೆ.
****
ಟೀಚರು : ಯಾಕೋ ರಾಜು ಶಾಲೆಗೆ ತಡವಾಗಿ ಬಂದೆ ? ಅದು ಸರಿ ಚಪ್ಪಲಿ ಏಕೆ ಹಾಕೊಂಡು ಬಂದಿಲ್ಲ. ?
ರಾಜು : ನಮ್ಮಪ್ಪ ಅಮ್ಮ ಜಗಳ ಆಡ್ತಿದ್ರು ಟೀಚರ್, ಅದಕ್ಕೆ ಬರಿ ಕಾಲಲ್ಲಿ ಬಂದೆ.
ಟೀಚರ್ : ಅವರು ಜಗಳವಾಡೋಕು ನೀನು ಬರಿ ಕಾಲಲ್ಲಿ ಬರೋಕು ಏನು ಸಂಬಂಧ ?
ರಾಜು : ಏನ್ ಮಾಡ್ಲಿ ಟೀಚರ್ ನನ್ನ ಒಂದು ಚಪ್ಪಲಿ ಅಮ್ಮನ ಕೈಯಲ್ಲಿತ್ತು ಮತ್ತೊಂದು ಚಪ್ಪಲಿ ಅಪ್ಪನ ಕೈಯಲ್ಲಿತ್ತು.
***
ಕಿಟ್ಟು : ರಾಜು, ನಿನಗೆ ಯಾರಾದ್ರೂ ಹುಡುಗಿಯರು ಫೋನ್ ಮಾಡಿದ್ರೆ ಏನ್ ಅನ್ಸುತ್ತೆ ?
ರಾಜು : ಆಹಾ ಜೇನುತುಪ್ಪ ಸವಿದ ಹಾಗಾಗುತ್ತೆ.
ಕಿಟ್ಟು : ಹುಡುಗಿ ಅಪ್ಪ ಫೋನ್ ಮಾಡಿದ್ರೆ ?
ರಾಜು : ಜೇನು ಕಡಿದಂತಾಗುತ್ತದೆ.
ಕಿಟ್ಟು : ಕಲ್ಲನ್ನ ಕೆತ್ತಿದರೆ
ರಾಜು : ಶಿಲ್ಪವಾಗುತ್ತೆ
ಕಿಟ್ಟು : ಕಲ್ಲು ನಮ್ಮನ್ನು ಕೆತ್ತಿದರೆ ?
ರಾಜು : ಕೊಲೆಯಾಗುತ್ತೆ.
***
ಕಿಟ್ಟು : ಲೋ ರಾಜು, ನಂಗೆ ಬೆಂಗಳೂರಿನಲ್ಲಿ ಸೈಟು ಅಲರ್ಟ್ ಆಗಿದೆ.
ರಾಜು : ಹೌದೇ ! ಎಲ್ಲಿ ?
ಕಿಟ್ಟು : ಸ್ಮಶಾಣದಲ್ಲಿ.
ರಾಜು : ಅದೇನಿತ್ತಪ್ಪ ನಿಂಗೆ ಅಷ್ಟು ಅರ್ಜೆಂಟು ಸ್ಮಶಾನದಲ್ಲಿ ಸೈಟ್ ಅಲರ್ಟ್ ಮಾಡಿಸಿಕೊಳ್ಳೋಕೆ.
***
ಗೀತಾ : ಜ್ಯೋತಿಷಿಗಳೇ, ನನ್ನ ಅದೃಷ್ಟ ಹೇಗಿದೆ ?
ಜ್ಯೋತಿಷಿ : ನಿನ್ನ ಅದೃಷ್ಟ ತುಂಬಾ ಚೆನ್ನಾಗಿದೆ. ನಿನ್ನ ಅದೃಷ್ಟ ಹೇಗಿದೆ ಅಂದ್ರೆ. ನೀನು ಕಿಟ್ಟನ್ನ ಮದುವೆಯಾದರೆ ರಾಜು ಅದೃಷ್ಟವಂತನಾಗುತ್ತಾನೆ, ರಾಜುನ ಮದುವೆ ಆದರೆ ಕಿಟ್ಟು ಅದೃಷ್ಟವಂತನಾಗುತ್ತಾನೆ.