ಹುಡುಗಿ : ಅಮ್ಮ, ಪೋಲಿ ಹುಡುಗರು ಬರ್ತಾ ಇದ್ದಾರೆ.
ತಾಯಿ : ನೀನು ಒಳಗಡೆ ಹೋಗು.
ಹುಡುಗಿ : ಅವರೊಂದಿಗೆ ಒಬ್ಬ ಮಠಾಧೀಶ್ವರನು ಬರ್ತಾ ಇದ್ದಾರೆ.
ತಾಯಿ : ಹಾಗಾದರೆ ನಿಮ್ಮಜ್ಜಿನ್ನು ಒಳಗಡೆ ಹೋಗೋಕೆ ಹೇಳು.
***
ಆಟೋ ಡ್ರೈವರ್ : ಸರ್ ಎಲ್ಲಿಗೆ ?
ರಾಜ : ಗಾಂಧಿಬಜಾರ್ ಗೆ ನೋಡಪ್ಪ ಮೀಟರ್ ಹಾಕು, ಹೆಚ್ಚಿಗೆ ದುಡ್ಡು ಕೇಳ್ಬೇಡ.
ಆಟೋ ಡ್ರೈವರ್ : ಹತ್ತಿ ಸಾರ್ ನೋಡಿ ಮೀಟರ್ ಹಾಕಿದ್ದೀನಿ (ಸ್ವಲ್ಪ ದೂರ ಹೋದ ನಂತರ) ಸಾರ್, ಸಾರ್ ಗಾಡಿದು ಬ್ರೇಕ್ ಫೇಲಾಯ್ತು. ಈಗೇನೂ ಮಾಡೋಣ ?
ರಾಜ : ಮೊದ್ಲು ಮೀಟರ್ ಆಫ್ ಮಾಡು ಸಾಕು.
***
ಡಾಕ್ಟರ್ : ನಿಮಗೆ ಮಂಡೆ ಆಪರೇಷನ್ ಮಾಡ್ತೀನಿ.
ಉಡುಪಿ ಮಾಣಿ : ಇದೆಂಥಾ ಪಿರಿ ಪಿರಿ ಡಾಕ್ಟ್ರು ಮಾರಾಯ್ರೆ, ನಾನು ಎದೆನೋವೂ ಅಂತ ಇಲ್ಲಿ ಬಂದರೆ ನನ್ನ ಮಂಡೆ ಆಪರೇಷನ್ ಮಾಡ್ತೀನಿ ಅಂತಾರಲ್ಲ ಮಾರಾಯ್ರೆ.
***
ಶಿಕ್ಷಕ : ಎಲ್ಲರೂ ಓಡೋಕೆ ಸಿದ್ದರಾಗಿದ್ದೀರಾ ?
ರಾಜು : ಸರ್, ಎಲ್ಲರೂ ಯಾಕೆ ಓಡ್ತಾ ಇದ್ದಾರೆ ?
ಶಿಕ್ಷಕ : ಇದು ಓಟದ ಸ್ಪರ್ಧೆ, ಗೆದ್ದವನೊಬ್ಬನಿಗೆ ಬಹುಮಾನ ಸಿಗುತ್ತೆ.
ರಾಜು : ಒಬ್ಬನಿಗೆ ಬಹುಮಾನ ಸಿಗೋದಾದ್ರೆ ಎಲ್ಲ ಯಾಕೆ ಓಡಬೇಕು ?
***
ಗೀತಾ : ರೀ ಸುಮ್ನೆ ಬರ್ರೀ ಅದೇನು ಅಲ್ಲಿ ನೋಡ್ತಾ ಇದ್ದೀರಿ ?
ರಾಜು : ಆ ಹುಡುಗಿ ಎಷ್ಟು ಚೆಂದವಾಗಿ ಡ್ರೆಸ್ ಮಾಡಿಕೊಂಡಿದ್ದಳು ಅದ ನೋಡ್ತಾ ಇದ್ದೆ.
ಗೀತಾ : ಅಲ್ರೀ ಮದುವೆಯಾಗಿ ಮೂರು ಮಕ್ಕಳಿದ್ರೂ ಹುಡುಗೀರನ್ನ ನೋಡೋದು ಬಿಡ್ಲಿಲ್ವಲ್ಲ.
ರಾಜು : ಅಂದ್ರೆ ನೀನು ಹೇಳೋದು ಉಪವಾಸ ಮಾಡೋನು ನೀನು ಕಾರ್ಡ್ ನೋಡ್ಲೇ ಬಾರ್ದೇನು ?














