ಬಾಸ್ : ಏನಯ್ಯ ನಾನಿಲ್ಲ ಅಂತ ನನ್ನ ಸೀಟಿನಲ್ಲೆ ಕುಳಿತು ಸಿಗರೇಟ್ ಸೇದುತ್ತಾ ಇದ್ದೀಯಾ ?
ರಾಜು : ಸುಳ್ಳು ಹೇಳಬೇಡಿ ಬಾಸ್, ದೇವರಾಣೆ ನಾನು ಸಿಗರೇಟ್ ಸೇದಲಿಲ್ಲ; ನಾನು ಸೇದಿದ್ದು ಬಿಡಿ.
***
ಒಬ್ಬ : ನೀನು ಹುಲಿಯ ಗುಹೆಯೊಳಗೆ ಹೋಗಿ ಜೀವಂತವಾಗಿ ಹೊರಬರಬಲ್ಲೆಯಾ ?
ಇನ್ನೊಬ್ಬ : ಖಂಡಿತವಾಗಿ, ಹುಲಿಯ ಗುಹೆಯೊಳಗೆ ಹೋಗಿ ಬರಬಲ್ಲೆ. ಆದರೆ ಆಗ ಹುಲಿ ಆ ಗುಹೆಯೊಳಗೆ ಇರಬಾರದು ಅಷ್ಟೆ.














