ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಪ್ರಿಯೆ, ಈ ನನ್ನ ಹಾರ್ಟ್ ಒಂದು ಮೊಬೈಲ್.

ಗೀತಾ : ಸರಿ, ಅದರಲ್ಲಿ ನಾನೇನು ?

ರಾಜು : ಅದರಲ್ಲಿ ನೀನೇ ನನ್ನ ಸಿಮ್ ಕಾರ್ಡ್.

ಗೀತ : ಹೌದಾ ?  ತುಂಬಾ ಸಂತೋಷ

ರಾಜು : ತುಂಬಾ ಸಂತೋಷ ಪಡಬೇಡ. ಏಕೆಂದರೆ, ಒಳ್ಳೆಯ ಆಫರ್ ಬಂದ್ರೆ ಸಿಮ್ ಕಾರ್ಡ್ ಬದಲಿಸುತ್ತೇನೆ.

***

ಡಾಕ್ಟರ್ : (ರಾಜು ಹಾಸಿಗೆ ಮೇಲೆ ಹೊರಳಾಡುತ್ತಿರುವುದನ್ನು ನೋಡಿ) ಯಾಕೆ ರಾಜು ? ಏನಾಯ್ತು ? ಹೀಗೆ ಹೊರಳಾಡ್ತಾ ಇದ್ದೀಯ ? ಔಷಧಿ ತಗೊಂಡ್ಯೋ ಇಲ್ವೋ ?

ರಾಜು : ನರ್ಸ್ ಕೊಟ್ಟ ಔಷಧಿ ತೆಗೆದುಕೊಂಡದ್ದಕ್ಕೆ ಡಾಕ್ಟರ್ ನಾನು ಹೀಗೆ ಒದ್ದಾಡ್ತಾ ಇರೋದು

ಡಾಕ್ಟರ್ : ಅದೇನು ಔಷಧಿ ಕೊಟ್ಲಯ್ಯಾ ?

ರಾಜು : ಆಕೆ ಸರಿಯಾದ ಔಷಧಿನೇ ಕೊಟ್ಳು, ನಾನೇ ತಪ್ಪು ಮಾಡಿದೆ.

ಡಾಕ್ಟರ್ : ನೀನೇನು ತಪ್ಪು ಮಾಡಿದೆ ?

ರಾಜು : ಆಕೆ ಕೊಟ್ಟ ಔಷಧೀನ ಚೆನ್ನಾಗಿ ಶೇಕ್ ಮಾಡಿ ಕುಡಿಯಿರಿ ಅಂತ ಹೇಳಿದ್ಲು, ನಾನು ಮರೆತು ಹಾಗೆ ಕುಡಿದೆ. ಅದಕ್ಕೆ ಔಷಧಿ ಹೊಟ್ಟೆಯಲ್ಲಿ ಸರಿಯಾಗಿ ಮಿಕ್ಸ್ ಆಗ್ಲಿ ಅಂತ ಹೊರಳಾಡ್ತಾ ಇದ್ದೀನಿ ಡಾಕ್ಟರೇ.

***

ತಂದೆ : ರಾಜು, ಪರೀಕ್ಷೆಯಲ್ಲಿ ಹೇಗೆ ಮಾಡಿದ್ದೀಯಾ?

ರಾಜು : ನಂಗೇನು ಗೊತ್ತಾಗಿಲ್ಲ, ಖಾಲಿ ಪೇಪರ್ ಕೊಟ್ಟು ಬಂದೆ.

ತಂದೆ : ಕಿಟ್ಟು, ನೀನು ಹೇಗೆ ಮಾಡಿದೆ ?

ಕಿಟ್ಟು : ನಾನು ಖಾಲಿ ಪೇಪರ್ ಕೊಟ್ಟು ಬಂದೆ.

ತಂದೆ : ಗುಂಡ, ನೀನು ಹೇಗೆ ಮಾಡಿದ್ದೀಯಾ ?

ಗುಂಡ : ನಾನು ಅವರ ಹಾಗೆ ಕಾಲಿ ಪೇಪರ್ ಕೊಟ್ಟು ಬಂದೆ,

ತಂದೆ : ನಿಮಗೆ ಅಷ್ಟೋ ಗೊತ್ತಾಗೋದಿಲ್ಲಾ, ಎಲ್ಲರೂ ಖಾಲಿ ಪೇಪರ್ ಕೊಟ್ಟು ಬಂದ್ರೆ ಎಲ್ರೂ ಕಾಪಿ ಮಾಡಿದ್ದೀವಿ ಅಂತ ತಿಳ್ಕೊಂಡಿದ್ದಿಲ್ಲವೇ ನಿಮ್ಮ ಮೇಡಂ.