ಮನೆ ಯೋಗಾಸನ ವೀರಭದ್ರಾಸನ

ವೀರಭದ್ರಾಸನ

0

೧. ಮಾದಲು ʼತಾಡಾಸನದಲ್ಲಿ ನಿಲ್ಲಬೇಕು.

೨. ಬಳಿಕ ನೀಳವಾಗಿ ಶ್ವಾಸವನ್ನು ಒಳಕ್ಕೆಳೆದು, ಮೇಲಕ್ಕೆ ಸ್ವಲ್ಪ ಜಿಗಿದು, ಅಂತರವು 4-4 ½ ಅಡಿ ಇರುವಷ್ಟು ಎರಡೂ ಕಾಲುಗಳನ್ನು ಪಕ್ಕಕ್ಕೆಆಗಲಿಸಿ ನಿಲ್ಲಬೇಕು.

೩. ಅನಂತರ ʼವೀರಭದ್ರಾಸನ-1ʼ ರಕಡೆಯ ಭಂಗಿಗೆ ದೇಹವನ್ನು ತರಬೇಕು.

೪. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು, ಮುಂಡಭಾಗವನ್ನು ಮುಂಭಾಗಸಿ ಎದೆಭಾಗವನ್ನು ಬಲದೊಡೆಯ ಮೇಲೊರಗಿಸಿ ತೋಳುಗಳನ್ನು ಮುಂದಕ್ಕೆ ನೀಡಲಾಗಿ ಚಾಚಿ, ಅಂಗೈಗಳನ್ನ ಜೋಡಿಸಿಟ್ಟು, ಈ ಭಂಗಿಯಲ್ಲಿ ಒಂದೆರಡು ಸಲ ಉಸಿರಾಡುವಷ್ಟು ಕಾಲ ನೆಲೆಸಬೇಕು.

೫.  ಈಗ ಉಸಿರನ್ನು ಹೊರಕ್ಕೆ ಬಿಡುತ್ತಿರುವಂತೆಯೇ, ದೇಹವನ್ನು ಸ್ವಲ್ಪ ಮುಂದಕ್ಕೆ ತೂಗಿಸಿ, ಎಡಗಾಲನ್ನು ನೆಲದಿಂದ ಮೇಲೆತ್ತಿ, ತೋಳುಗಳ ಮಟ್ಟಕ್ಕೆ ತಂದು, ಬಲಗಾಲನ್ನು ಲೋಹದ ಕಂಬಿಯಂತೆ ಬಿರುಗೊಳಿಸಿ, ನೆಲಕ್ಕೆ ಲಂಬವಾಗುವಂತೆ ಊರಿಡಬೇಕು.

೬.  ಈ ಭಂಗಿಯಲ್ಲಿ ಸುಮಾರು 20-30 ಸೆಕೆಂಡುಗಳ ಕಾಲ ಸಮವಾಗಿ ಮತ್ತು ನೀಳವಾಗಿ ಉಸಿರಾಟ ನಡೆಸುತ್ತಾ ನೆಲಸಬೇಕು.

೭. ಈ ರೀತಿಯಾದ ಸಮತೋಲನ ಸ್ಥಿತಿಯಲ್ಲಿರುವಾಗ, ಬಲಗಾಲಿನ ವಿನಾ ಉಳಿದ ದೇಹದಭಾಗವನ್ನೆಲ್ಲ ನೆಲಕ್ಕೆ ಸಮಾನಾಂತರಗೊಳಿಸಬೇಕು. ಬಲಗಾಲನ್ನು ಮಾತ್ರ ಹಿಂದೆ ವಿವರಿಸಿ ದಂತೆ ನೇರಮಾಡಿ, ಬಿಗಿಗೊಳಿಸಿ, ದೇಹವನ್ನು ಎತ್ತಿಹಿಡಿದ ಆಧಾರ ಸ್ಥಂಭದಂತೆ ನೆಲಕ್ಕೆ ಲಂಬವಾಗಿಸಿ ನಿಲ್ಲಬೇಕು. ಬಳಿಕ ಬಲತೊಡೆಯ ಹಿಂಬದಿಯನ್ನು ಚೆನ್ನಾಗಿ ಸೆಳೆದು, ತೋಳುಗಳನ್ನೂ ಮತ್ತು ಎಡಗಾಲ ತುದಿಯನ್ನೂ, ಇಬ್ಬರೂ ಹಿಂದೂಮುಂದು ನಿಂತು ಅವನ್ನು ಅತ್ತಿತ್ತ ಸೆಳೆಯುತ್ತಿರುವರೋ, ಎನ್ನುವಂತೆ ನೀಳವಾಗಿ ಚಾಚಬೇಕು.

೮. ಆಮೇಲೆ ಉಸಿರಾಟವನ್ನು ಹೊರದೂಡಿ, ಮತ್ತೆ ʼವೀರಭದ್ರಸನ-1ʼ ರ ಆಸನಭಂಗಿಗೆ ಹಿಂದಿರುಗಬೇಕು.

೯. ಈ ಆಸನ ಭಂಗಿಯನ್ನು ಇದೇ ಕ್ರಮದಲ್ಲಿ ಎಡಗಡೆಯಲ್ಲೂ ಅಭ್ಯಾಸ ಬೇಕು.

ಪರಿಣಾಮಗಳು :-

ಈ ಆಭ್ಯಾಸದಿಂದ ಅಭ್ಯಾಸಿಗೆ ಸಾಮರಸ್ಯ, ಸಮತೋಲನ, ಸಮಾಧಾನ ಮತ್ತು ಶಕ್ತಿ ಇವೆಲ್ಲವೂ ಲಭಿಸುವುಲ್ಲದೆ ಈ ಆಸನ ಅಭ್ಯಾಸದಿಂದ ಕಿಬ್ಬೊಟ್ಟೆಯೊಳಗಿನ ಅಂಗಗಳಿಗೆ ಸಂಕೋಚಶಕ್ತಿ ದೊರೆತು, ಆ ಮೂಲಕ ಅವು ರೂಪಗೊಳ್ಳುವುದು. ಅಲ್ಲದೆ, ಕಾಲುಗಳಲ್ಲಿಯ ಮಾಂಸಖಂಡಗಳು ಸುರೂಪವನ್ನು ಪಡೆದು ಗಟ್ಟಿಮುಟ್ಟಾಗುತ್ತದೆ. ಓಟದ ಪಂದ್ಯದಲ್ಲಿ ಭಾಗವಹಿಸುವವರು ಇದರಿಂದ ಉತ್ತಮ ಫಲವನ್ನು ಪಡೆಯುವರು. ಏಕೆಂದರೆ ಅವಶ್ಯಕವೆನಿಸಿದ ಚಾಕಚಕ್ಯತೆಯನ್ನು ಇದರಿಂದ ಪಡೆಯುವುದಲ್ಲದೆ ಅದಕ್ಕೆ ತಕ್ಕ ಹುರುಪನ್ನೂ ಅವರು ಗಳಿಸುತ್ತಾರೆ.

ಈ ಆಸನಭ್ಯಾಸದಲ್ಲಿಯ ಚಲನವಲನಗಳೆಲ್ಲವೂ ಅಭ್ಯಾಸಕನ ವರ್ತನೆ, ದೇಹ ವಿನ್ಯಾಸಗಳನ್ನು ಉತ್ತಮಗೊಳಿಸುತ್ತದೆ. ದೇಹಭಾರವೆಲ್ಲ ಹಿಮ್ಮಡಿಯ ಮೇಲೆ ಹೊರಿಸಿ ಕ್ರಮತಪ್ಪಿ ನಿಲ್ಲುವುದನ್ನು ಅಭ್ಯಾಸಿಸಿದಲ್ಲಿ, ಆದರಿಂದ ಸಮರೂಪತೆಯ ಬೆಳವಣಿಗೆಗೆ ಅಡಚಣೆ ಉಂಟಾಗುವುದು ಮಾತ್ರವಲ್ಲದೆ, ಬೆನ್ನು ಮೂಳೆಯಲ್ಲಿಯ ಸ್ಥಿತಿಸ್ಥಾಪಕತ್ವಕ್ಕೂ ಧಕ್ಕೆ ತಗಲುವುದು.   ಹಿಮ್ಮಡಿಗಳ ಮೇಲೆ ಶರೀರದ ಭಾರವನ್ನು ಬಿಟ್ಟು ನಿಲ್ಲುವ ಅಭ್ಯಾಸವು ಹೊಟ್ಟೆಯನ್ನು ಮುಂದೂಡುವುದು ಮತ್ತು ದೇಹಕ್ಕೂ ಮನಸ್ಸಿಗೂ ಚಟುವಟಿಕೆಗಳನ್ನು ತಗ್ಗಿಸುವುದು ಸಹಾಯ ಮಾಡುತ್ತದಲ್ಲದೆ ಹೊಟ್ಟೆಯಲ್ಲಿನ ಮಾಂಸ ಕಂಡಗಳನ್ನು ಕ್ರಮಪಡಿಸಿಟ್ಟು ಮನಸ್ಸು ದೇಹಕ್ಕೆ ಲವಲವಿಕೆ, ಉತ್ಸಾಹಗಳು ನೀಡುತ್ತದೆ.

ಹಿಂದಿನ ಲೇಖನನೆಲ್ಲಿಕಾಯಿ
ಮುಂದಿನ ಲೇಖನಹಾಸ್ಯ