ರಾಜು : ಅವತ್ತು ನನ್ನ ಲವರ್ ಗೀತಾಗೆ ಹೇಳಿದೆ ಗುಡ್ ಮಾರ್ನಿಂಗ್.
ಕಿಟ್ಟು : ಒಳ್ಳೇದಾಯ್ತು ಬಿಡು.
ರಾಜು : ಆದರೆ ಅವರಪ್ಪ ನನಗೆ ಹೇಳಿದ ನಿನಗಿದು ಲಾಸ್ಟ್ ವಾರ್ನಿಂಗ್.
***
ರಾಜು : ಯಾಕೋ ಸುಬ್ಬ ನಿನಗೂ, ನಿನ್ನ ಹೆಂಡ್ತಿಗೂ ಅಷ್ಟು ಸರಿ ಇಲ್ಲವಂತೆ ?
ಗೀತಾ : ಎಷ್ಟು ದೊಡ್ಡದಿದೆ ತೋರಿಸಿ
ರಾಜು : ಹೋಗ್ಲಿ ಬಿಡು, ಹೃದಯ ತೋರಿಸಲು ನಿನ್ನ ಮೊಬೈಲ್ ಸ್ಕ್ರೀನ್ ಬಹಳ ಚಿಕ್ಕದು.
***
ಗೀತಾ : ರೀ, ಈ ವಾರ ನಮ್ಮ ದೇಶಾನೆಲ್ಲ ಸುತ್ಕೊಂಡು ಬರೋಣ.
ರಾಜು : ಸರಿ ಮುಂದಿನ ವಾರ ?
ಗೀತ : ಮುಂದಿನ ವಾರವೆಲ್ಲ ಶಾಪಿಂಗ್ ಮಾಡೋಣ
ರಾಜು : ಅದೂ, ಸರಿ ಅದರ ಮುಂದಿನ ವಾರ ?
ಗೀತಾ : ಅದರ ಮುಂದಿನ ವಾರ ಯಾವುದಾದ್ರೂ ಹೋಟೆನಲ್ಲಿರೋಣ.
ರಾಜು : ಅದರ ಮುಂದಿನವಾರ ದೇವಸ್ಥಾನಕ್ಕೆ ಹೋಗೋಣ.
ಗೀತಾ : ದೇವಸ್ಥಾನಕ್ಕೆ ಯಾಕೆ ?
ರಾಜು : ಭಿಕ್ಷೆ ಬೇಡೋಣ.