ರಾಜು : (ನರಕದಲ್ಲಿದ್ದಾಗ) ಯಮರಾಜ, ಪಾಕಿಸ್ತಾನಕ್ಕೆ ನಾನೊಂದು ಕಾಲ್ ಮಾಡಲೆ ?
ಯಮಧರ್ಮ : ಧಾರಳವಾಗಿ ಮಾಡು.
ರಾಜು : ಯಮರಾಜ ಬಿಲ್ ಎಷ್ಟಾಯ್ತು ?
ಯಮಧರ್ಮ : ನೀನೇನು ಫೋನ್ ಬಿಲ್ ಕೊಡಬೇಕಾಗಿಲ್ಲ
ರಾಜು : ಹೌದೇ ! ಏಕೆಂದು ಕೇಳಬಹುದೆ?
ಯಮಧರ್ಮ : ನರಕದಿಂದ ನರಕಕ್ಕೆ ಫ್ರೀ ಕಾಲ್.
****
ರಾಜು : ಗೀತ, ನಾನಿನ್ನು ಹೆಚ್ಚಿಗೆ ದಿನ ಬದುಕೊಲ್ಲ. ನನ್ನ ಕೊನೆ ಆಸೆ ಈಡೇರಿಸ್ತೀಯಾ ?
ಗೀತಾ : ಅದೇನು ಹೇಳಿ ಖಂಡಿತಾ ಈಡೇರಿಸ್ತೀನಿ
ರಾಜು : ಹೇಗಾದರೂ ಮಾಡಿ ಆ ಕೊನೆಯ ಮನೆ ಈರಣ್ಣನ ಮದುವೆ ಆಗ್ತೀಯಾ ?
ಗೀತಾ : ರೀ ಅವರು ನಿಮ್ಮ ಆಜನ್ಮ ಶತ್ರು ಅಲ್ವೇ ?
ರಾಜು : ಅದಕ್ಕೆ ಹೇಳಿದ್ದು, ಅವನು ಕೊರಗಿ ಕೊರಗಿ ಸಾಯ್ತಾನೆ ನಾನು ಕಣ್ಣಾರೆ ಕಂಡು ಸಾಯ್ಬೇಕು.














