ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಅಪ್ಪ : ರಾಜು, ಹೊಸ ಕುರ್ಚಿ ಎಲ್ಲಿಂದ ತಂದ್ಯೋ?

ರಾಜು : ಅದೇ ಕಣಪ್ಪ, ನಿನ್ನೆ ಸಂದರ್ಶನಕ್ಕೆ ಹೋಗಿದ್ನಲ್ಲ. ಅವರು “ಟೇಕ್ ಯುವರ್ ಸೀಟ್” ಅಂದ್ರು ಇದ್ನ ಎತ್ಕೊಂಡ್ ಬಂದೆ. 

Join Our Whatsapp Group

***

 ಕಿಟ್ಟು : ಲೋ ರಾಜು, ಕರೆಂಟ್ ಹೋಯ್ತು ಕ್ಯಾಂಡಲ್ ಹತ್ತಿಸೋ.

ರಾಜು : ತಗೊಪ್ಪ ಕ್ಯಾಂಡಲ್ ಹತ್ತಿಸಿದಿನಿ.

 ಕಿಟ್ಟು : ಕರೆಂಟ್ ಬಂತು ಕ್ಯಾಂಡಲ್ ಆರಿಸೋ.

 ರಾಜು : ಆಯ್ತಪ್ಪಾ ಆರಿಸಿದೆ. ಲೇಟನ್ನು ಆರಿಸಿದ್ದೀನಿ, ಸುಮ್ನೆ ಮಲಕ್ಕೋ

 ಕಿಟ್ಟು : ಮತ್ತೇಕೋ ಲೇಟ್ ಹಾಕಿದೆ?

 ರಾಜು : ಕ್ಯಾಂಡಲ್ ಆರಿಸಿದ್ನೋ  ಇಲ್ವೋ ಅಂತ ಅನುಮಾನವಾಯ್ತು ಅದಕ್ಕೆ ಲೇಟ್ ಹಾಕಿ ನೋಡಿದೆ.

***

 ಕಿಟ್ಟು : ನಿನ್ನ ಪ್ರೇಯಸಿಗೆ ಒಂದು ಸಲ ಪ್ರೇಮ ಪತ್ರ ಬರೆದಿದ್ದೆಯಲ್ಲಾ?

 ರಾಜು : ಲೋ ಒಂದು ಸಲ ಅಲ್ವೋ, ಮೂರು ವರ್ಷದಿಂದ ಒಂದೇ ಸಮನೆ ಪ್ರೇಮಪತ್ರ ಬರೆಯುತ್ತಲೇ ಇದ್ದೇನೆ..

 ಕಿಟ್ಟು : ಸರಿ ಮುಂದೇನಾಯ್ತು?

 ರಾಜು : ಅವಳಿಗೆ ಪೋಸ್ಟ್ ಮ್ಯಾನ್ ಜೊತೆ ಮದುವೆಯಾಯಿತು.