ಶಿಕ್ಷಕ : ಮಾತೃದೇವೋಭವ, ಆಚಾರ್ಯ ದೇವೋಭವ ಅಂತ ಹೇಳ್ತಾರೆ. ಈ ಇಬ್ಬರಲ್ಲಿ ಯಾರು ಉತ್ತಮವೋ?
ರಾಜು :‘ ಆಚಾರ್ಯ ದೇವೋಭವ’ ಅಂದರೆ ಶಿಕ್ಷಕರಾದ ನೀವೇ ಉತ್ತಮ.
ಶಿಕ್ಷಕ : ಅದು ಹೇಗೆ ಹೇಳ್ತೀಯ?
ರಾಜು : ನಮ್ಮ ತಾಯಿ, ನನ್ನ ತಮ್ಮನ ಮಲಗಿಸೋಕೆ ಒಂದು ಘಂಟೆ ತಗೋಳ್ತೆಳೆ, ನೀವು ಕೇವಲ 15 ನಿಮಿಷದಲ್ಲಿ ತರಗತಿ ಹುಡುಗರನ್ನೆಲ್ಲಾ ಮಲಗಿಸ್ತೀರಿ ಆದ್ದರಿಂದ ನೀವೇ ಉತ್ತಮ ಗುರುಗಳೆ.
***
ಟೀಚರ್ : ಹೋಂ ವರ್ಕ್ ಯಾರು ಮಾಡ್ಕೊಂಡು ಬಂದಿಲ್ಲ ಹೇಳಿ?
ರಾಜು : ನಾನು ಮಾಡ್ಕೊಂಡು ಬಂದಿಲ್ಲ ಟೀಚರ್
ಟೀಚರ್ : ಯಾಕೋ ನಿನಗೇನಾಯ್ತು?
ರಾಜು : ನಾನಿರೋದೇ ಹಾಸ್ಟೆಲ್ ನಲ್ಲಿ ಹೋಂ ವರ್ಕ್ ಹೇಗೆ ಮಾಡೋಕೆ ಸಾಧ್ಯ ಟೀಚರ್?
***
ಕಿಟ್ಟು : ಲೋ ರಾಜು ಆ ಸ್ವಾಮಿಗಳ ಹತ್ರ ಮಂತ್ರ ಕಲಿಯೋಕೆ ಹೋಗಿದ್ಯಲ್ಲಾ ಕಲ್ತು ಬಂದ್ಯಾ?
ರಾಜು : ಕಲ್ತು ಬಂದೆ ನಿನ್ಮೇಲೆ ಪ್ರಯೋಗಿಸಲೇ?
ಕಿಟ್ಟು : ಆಯ್ತು ಪ್ರಯೋಗಿಸು
ರಾಜು : ಛೂ ಮಂತರ್ ಓಂ, ರೀಂ, ಝೀಂ, ನೀಂ,ಏನಾದ್ರೂ ಆಯ್ತಾ?
ಕಿಟ್ಟು : ಏನು ಆಗ್ಲಿಲ್ಲ.
ರಾಜು : ಸ್ವಾಮಿಗಳು ಹೇಳಿದ್ದು ನಿಜವಾಯ್ತು
ಕಿಟ್ಟು : ಸ್ವಾಮಿಗಳು ಏನು ಹೇಳಿದ್ರು?
ರಾಜು : ಕೋತಿಗಳ ಮೇಲೆ ಈ ಮಂತ್ರ ಪ್ರಭಾವ ಬೀರೋದಿಲ್ವಂತೆ..