ಅಪ್ಪ : ಅಲ್ಲೋ, ಗಣಿತದಲ್ಲಿ ಮತ್ತೆ ಫೇಲಾಗಿದ್ದೀಯಾ?
ರಾಜು : ನಾನೇನು ಮಾಡ್ಲಪ್ಪ ನಮೇಷ್ಟ್ರಿಗೇ ಸರಿಯಾಗಿ ಲೆಕ್ಕ ಬರೋಲ್ಲ.
ಅಪ್ಪ : ಅದು ನಿಂಗೆ ಹೇಗೋ ಗೊತ್ತಾಯ್ತು?
ರಾಜು : ಮೊದಲನೇ ದಿನ ಐದು ಐದು ಹತ್ತು ಅಂದ್ರು, ಎರಡನೆಯ ದಿನ ಎಂಟು ಎರಡು ಹತ್ತು ಅಂದ್ರು, ಮೂರನೇ ದಿನ ಆರು ನಾಲ್ಕು ಹತ್ತು ಅಂದ್ರು, ಲೆಕ್ಕದಲ್ಲಿ ಅವರೇ ಅಷ್ಟು ವೀಕಾಗಿರೋವಾಗ ನಾನು ಹೆಂಗಪ್ಪಾ ಪಾಸಾಗೋದು?
***
ಅಮೆರಿಕನ್ : ನೋಡಿ, ಈ ಭೂಮಿ ಇಷ್ಟು ಅಗೆದ್ಮೇಲೆ ಈ ತಾಮ್ರದ ತಂತಿಗಳು ಸಿಕ್ಕಿವೆ. ಇದರಿಂದ ಗೊತ್ತಾಗುತ್ತದೆ ಎಷ್ಟೋ ವರ್ಷಗಳ ಹಿಂದೆಯೇ ನಮ್ಮಲ್ಲಿ ಟೆಲಿಗ್ರಾಫ್ ಕಂಡು ಹಿಡಿಯಲಾಗಿತ್ತೆಂದು.
ಜಪಾನಿ : ಈ ಭೂಮಿ ಅಗೆದಾಗ ‘ಆಪ್ಟಿಕಲ್ ಫೈಬರ್’ ಸಿಕ್ಕಿದೆ. ಅಂದರೆ ಎಷ್ಟೋ ವರ್ಷಗಳ ಹಿಂದೆಯೇ ಲ್ಯಾಂಡ್ ಲೈನ್ ಪಿನ್ ಕಂಡುಹಿಡಿಯಲಾಗಿತ್ತು.
ಭಾರತದವ : ನೋಡಿ ಎಷ್ಟು ಅಗೆದರೂ ಏನು ಸಿಗಲಿಲ್ಲ. ಅಂದರೆ, ನಮ್ಮಲ್ಲಿ ಪ್ರಪ್ರಥಮವಾಗಿ ಮೊಬೈಲ್ ಫೋನ್ ಕಂಡು ಹಿಡಿಯಲಾಗಿತ್ತು.