ಪೊಲೀಸ್ : ಯಾಕೋ ರಾತ್ರಿ 2 ಗಂಟೆಯಾದ್ರೂ ಮನೆಗೆ ಹೋಗ್ದೆ ಅಲೀತಾ ಇದ್ದೀಯ?ನಿಜಾ ಹೇಳು, ಇಲ್ಲಾ ಅಂದ್ರೆ ಕರ್ಕೊಂಡು ಹೋಗಿ ಏರೋಪ್ಲೇನ್ ಹತ್ತುಸ್ತೀನಿ.
ರಾಜು : ಏರೋಪ್ಲೇನ್ ಬೇಡ,ಯಾವುದಾದ್ರೂ ಆಟೋ ಹತ್ತಿಸಿ ಸಾಕು .
***
ರಾಜು : (ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ. ಬೆಂಗಳೂರು ಕಂಡೊಡನೆ ಬೆಂಗಳೂರು ಬೆಂಗಳೂರು ಎಂದು ಕಿರುಚಿಕಿದ.)
ಗಗನಸಖಿ : ರೀ ಹಾಗೆ ಕೂಗಬೇಡಿ.
ರಾಜು : ಸರಿ ಹಾಗಾದ್ರೆ ಬೆಂದಕಾಳೂರು ಬೆಂದಕಾಳೂರು )(ಎಂದು ಕಿರುಚಿದ.)
***
ಕಿಟ್ಟು : ಬದುಕು ಅಂದ್ರೇನು?
ರಾಜು : ಬದುಕು ಅಂದ್ರೆ ಒಂದು ಸ್ಕೂಟರ್ ಇದ್ದ ಹಾಗೆ.
ಕಿಟ್ಟು : ಅದು ಹೇಗೆ?
ರಾಜು : ಹೆಂಡ್ತಿ ಒಂದು ಚಕ್ರ, ಗಂಡ ಒಂದು ಚಕ್ರ.
ಕಿಟ್ಟು : ಆಯ್ತು ಅದರಲ್ಲಿ ಒಂದು ಚಕ್ರ ಪಂಚರಾದ್ರೆ ಗಾಡಿ ಹೇಗೆ ಮುಂದೆ ಹೋಗುತ್ತೆ?
ರಾಜು : ಅದನ್ನ ಮುಂಚೆ ಯೋಚಿಸಿಯೇ ಒಂದು ಸ್ಟೆಪ್ನಿ ಇಟ್ಕೊಂಡಿದ್ದೀನಿ.