ಗಂಡ ಹೆಂಡತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದ ರಕ್ತದಾನ ಮಾಡಬೇಕಾಗಿ ಬಂದಾಗ ಗಂಡನ ರಕ್ತವು ಸರಿ ಹೊಂದಿತು, “ನಿಮ್ಮ ಮತ್ತು ನಿಮ್ಮ ಹೆಂಡತಿ ರಕ್ತ ಒಂದೇ ಗುಂಪಿನಾದ್ದಾಗಿದೆ “ಆಶ್ಚರ್ಯ ಎಂದರು ಡಾಕ್ಟರ್ ಆಶ್ಚರ್ಯ ಏನು ಬಂತು ಕಳೆದ 30 ವರ್ಷಗಳಿಂದ ಸದಾ ನನ್ನ ರಕ್ತ ಹೀರುತ್ತಾ ಇದ್ದವಳಲ್ಲವೇ ಅವಳು!”
***
ಲಾಯರ್ :ನಿನಗೆ ಎಷ್ಟು ವರ್ಷ ಮೇಡಂ?
ನಾನು 31 ಚಳಿಗಾಲವನ್ನು ಕಂಡಿದ್ದೇನೆ
ಲಾಯರ್ ಎಷ್ಟು ವರ್ಷ ಕುರುಡರಾಗಿದ್ದೀರಿ
***
ಮಂಗೇಶರಾಯ ನನ್ನ ಮಗಳಿಗೆ ಒಳ್ಳೇ ಗಂಡನ್ನು ನೋಡು ಎಂದಿದ್ದೆನೆಲ್ಲ
ಗಣೇಶರಾಯ ಒಳ್ಳೆ ಗಂಡಿಗೇನು ಕಡಿಮೆ.ಎಷ್ಟೂ ಇದ್ದಾರೆ ಎಷ್ಟೋ ಇದ್ದಾರೆ
ಮಂಗೇಶರಾಯ ಮತ್ತೇಕೆ ಕರ್ಕೊಂಡು ಬರ್ಲಿಲ್ಲ
ಗಣೇಶರಾಯ ಅವರೆಲ್ಲ ಒಳ್ಳೆಯ ಹೆಣ್ಣು ಬೇಕು ಅಂತ ಹೇಳಿದ್ದಾರೆ