ನ್ಯಾಯಾಧೀಶ : ನೀನು ಈ ಅಪರಾಧವನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಿರುವಿ. ಎಲ್ಲರೂ ನಿನ್ನನ್ನು ಮೆಚ್ಚಲೇಬೇಕು, ಅಲ್ಲವೇ?
ಅಪರಾಧಿ : ತಾವು ನನ್ನನ್ನು ಎಷ್ಟು ಹೊಗಳಿ ಉಬ್ಬಿಸಿದರೂ ಪ್ರಯೋಜನವಿಲ್ಲ ಸರ್. ನಾನು ನನ್ನ ಅಪರಾಧವನ್ನು ಒಪ್ಪುವವನಲ್ಲ.’
ಕೋಮಲಾ : ಕಳೆದ ವಾರ ನನಗೊಂದು ಉತ್ತಮ ನೌಕರಿಗೆ ಕರೆ ಬಂದಿತ್ತು. ಒಳ್ಳೆ ಸಂಬಳ ವಾರಕ್ಕೆ ಐದೇ ದಿನ ಕೆಲಸ ಕಾರು, ಮನೆ ಬಾಡಿಗೆ ಎಲ್ಲ ಸೌಲತ್ತೂ ಇತ್ತು. ಆದರೆ ನಾನು ಅದರಲ್ಲಿ ಹೆಚ್ಚಿನ ಭವಿಷ್ಯ ಕಾಣದ್ದರಿಂದ ನಾನು ಸೇರಿಕೊಳ್ಳಲಿಲ್ಲ.
ವಿಮಲಾ : ಎಲ್ಲ ಒಳ್ಳೆಯದಿದ್ದಾಗ ಏಕೆ ಬಿಟ್ಟೆ?
ಕೋಮಲಾ : ಆ ಕಂಪನಿ ಮಾಲಿಕನಿಗೆ ಮದುವೆಯಾಗಿದೆ.
ಒಬ್ಬ ಸರ್ದಾರಜಿ ಪರೀಕ್ಷೆ ಪಾಸಾಗಿ ಡಾಕ್ಟರ್ ಆದ.ನಂತರ ಸರ್ಜನ್ ಆದ. ಅವನ ಮೊದಲನೇ ರೋಗಿಯನ್ನು ಆಪರೇಷನ್ ಮಾಡಿಸಿಕೊಳ್ಳಲು ಅಪರೇಷನ್ ಟೇಬಲ್ ಮೇಲೆ ಮಲಗಿಸಿದರು ಸರ್ದಾರಜಿ ಕೈ ಮುಗಿದು, ದೇವರಿಗೆ ಹೇಳಿದ ದೇವರೇ, ಇದು ನನ್ನ ಮೊದಲ ಆಪರೇಷನ್. ಇದನ್ನು ನಿನಗೆ ಅರ್ಪಿಸುತ್ತಿದ್ದೇನೆ ಎಂದನು!














