ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಇನ್ಸ್ ಪೆಕ್ಟರ್ :“ಏನಯ್ಯಾ ಕಾನ್ಸ್ ಟೇಬಲ್,  ಆಕಳಿಸುತ್ತಾ ಇದಿ.

 ಕಾನ್ಸ್ ಟೇಬಲ್ : “ಏನು ಸಾರ್  ಇನ್ನೇನ್ಮಾಡಲಿ. ಈ ವಾರವೆಲ್ಲಾ ಬೇಜಾರಾಗಿದೆ. ಒಂದು ಕೊಲೆ ಇಲ್ಲ,ಕಳ್ಳತನ ಇಲ್ಲ, ಗಲಾಟೆ ಇಲ್ಲ. ಹೀಗೆ ಇದ್ದರೆ ಕೆಲಸ ಇಲ್ಲ ಎಂದು ಎಲ್ಲಿ ಕೆಲಸದಿಂದ ತೆಗೆದು ಬಿಡ್ತಾರೋ ಅಂತ ಭಯವಾಗಿದೆ”.

Join Our Whatsapp Group

***

   ಡಾಕ್ಟರ್ ಹೆಂಡತಿ : ಊರಿಗೆಲ್ಲಾ ವೈದ್ಯಮಾಡ್ತಾರೆ. ತನ್ನ ಹೆಂಡತಿ ಮಕ್ಕಳಿಗೆ ಏನಾದರೂ ಕಾಯಿಲೆ ಬಂದರೆ ಉರಿದುಬೀಳ್ತಾರೆ. ಅಲ್ಲಾ ಉರಿದುಬಿದ್ರೆ ರೋಗ ಗುಣವಾಗುತ್ಯೆ.  ವರ್ಷದಿಂದ ಹೇಳ್ತಾ ಇದೀನಿ ನಿಮ್ಮ ಎರಡನೇ ಮಗನಿಗೆ ಕಿವಿ ಸೋರೋದು ನಿಂತಿಲ್ಲ ಅಂತ ಯಾವ ಡಾಕ್ಟರಿಗಾದ್ರೂ ತೋರಿಸಿ ಅಂತ.ಕಿವಿ ಮೇಲೆ ಬಿದ್ರೆ ತಾನೆ. ಮನೆ ಮುಂದೆ ಬೋರ್ಡ್ ಬೇರೆ E. N. T  ಸ್ಪೆಷಲಿಷ್ಟು ಅಂತ. 

***

 ವಿವಾಹಿತ ತರುಣಿ :“ಏಜೆಂಟರೆ, ನಾನು ಒಂದು ವೇಳೆ ನನ್ನ ಗಂಡನ ಮೇಲೆ ಒಂದು ಜೀವವಿಮಾ ಪಾಲಿಸಿತಕೊಂಡ ಒಂದು ಗಂಟೆಒಳಗೆ ಅವನು ಸತ್ತು ಹೋದರೆ ನನಗೇನು ಸಿಗುತ್ತೆ!”

 ವಿಮಾ ಏಜೆಂಟ್ : “ಜೀವಾವಧಿ ಶಿಕ್ಷೆ ”