ಮಾಲೀಕ : ನೀನು ಕಾರ್ಖಾನೆಯಲ್ಲಿ ಎಷ್ಟು : ವರ್ಷ ಕೆಲಸ ಮಾಡಿದೆ?
ನೌಕರ : ಐವತ್ತು ವರ್ಷ
ಮಾಲೀಕ : ನಿನ್ನ ವಯಸ್ಸು
ನೌಕರ : 30 ವರ್ಷ
ಮಾಲೀಕ : ನಿನ್ನ ವಯಸ್ಸೆ ಮೂವತ್ತಿರೋವಾಗ 50 ವರ್ಷ ಹೇಗೆ ಕೆಲಸ ಮಾಡಿದೆ?
ನೌಕರ : ಆ ಕಾರ್ಖಾನೆಯಲ್ಲಿ ಓವರ್ ಟೈಮ್ ಓಟಿ ಜಾಸ್ತಿ.
****
ಒಬ್ಬ ಅಮೆರಿಕನ್ ಪ್ರವಾಸಿ ಇಟಲಿಯಲ್ಲಿನ ವಸ್ತು ವಿಶೇಷಗಳನ್ನು ನೋಡುತ್ತ ಬರುತ್ತಿದ್ದ.
ಗೈಡ್ : ನೋಡಿ ಇದೇ ಪೀಸಾದ ಓಲು ಗೋಪುರ
ಪ್ರವಾಸಿ : ಏನಂದಿರಿ
ಗೈಡ್ :ಪಿಸಾದ ಓಲುಗೋಪುರ
ಪ್ರವಾಸಿ : ನನಗೆ ನೀವು ಹೇಳಿದ ಹೆಸರೇ ಹೊಳೆಯೋಲ್ಲ.ಆದರೆ ಓಲುಗೋಪುರ ನೋಡಿದರೆ ನನ್ನ ಮನೆ ಕಟ್ಟಿಕೊಟ್ಟ ಕಂಟ್ರಾಕ್ಟರ್ ನೆನಪಿಗೆ ಬರುತ್ತಾನೆ.
****
ಆಫೀಸ್ ನಲ್ಲಿ ಅಧಿಕಾರಿಯೊಡನೆ ಮಾತು:
“ಸರ್,ನಿಮ್ಮ ಹುಟ್ಟಿದ ಹಬ್ಬಕ್ಕೆ ಈ ಬಾರಿ ಚಿನ್ನದ ಚೇಳು ಪ್ರೆಸೆಂಟ್ ಮಾಡೋಣ ಅಂತಿದೀವಿ.ಏಕೆಂದರೆ ನೀವು ಹುಟ್ಟಿದ್ದು ವೃಷ್ಚಿಕ ಲಗ್ನದಲ್ಲಿ”
“ಒಳ್ಳೆಯದು ನನ್ನ ಹೆಂಡತಿ ಹುಟ್ಟಿದ್ದ ಹಬ್ಬ ಮುಂದಿನ ವಾರ ಇದೆ ಅವಳು ಹುಟ್ಟಿದ್ದು ವೃಷಭ ಲಗ್ನದಲ್ಲಿ”