ರೋಗಿ : ಡಾಕ್ಟರೇ, ನನ್ನ ಕಣ್ಣು ಪರೀಕ್ಷೆ ಮಾಡಿ.ದೂರದ ವಸ್ತುಗಳು ಸರಿಯಾಗಿ ಕಾಣಿಸೋಲ್ಲ.
ವೈದ್ಯ: ಕಿಟಕಿಯ ಬಳಿಗೆ ಕರೆದೊಯ್ದು ಕಿಟಕೀಲಿ ನೋಡು. ದೂರದಲ್ಲಿ ಆಕಾಶದಲ್ಲಿ ಕಾಣಿಸುತ್ತಿರೋದು ಏನು?
ರೋಗಿ : ನನಗಷ್ಟು ಕಾಣೋಲ್ವೆ ಇದು ಸೂರ್ಯ.
ವೈದ್ಯ : ಸರಿ, ನಿಮಗಿನ್ನೆಷ್ಟು ದೂರ ಕಾಣಬೇಕು. ನಿಮ್ಮ ಕಣ್ಣು ದೃಷ್ಟಿ ಸರಿಯಾಗಿದೆ ಹೋಗಿ.
***
ಒಬ್ಬ ಸರ್ದಾರಜಿ ಕಲರ್ ಟಿವಿ ಖರೀದಿಸಿದ. ಮನೆಗೆ ಬಂದವನೇ ಬಚ್ಚಲು ಮನೆಗೆ ಹೋಗಿ ನೀರಿನಲ್ಲಿ ಮುಳುಗಿಸಿದ. ಮನೆಯವರೆಲ್ಲಾ ಆಶ್ಚರ್ಯದಿಂದ ನೋಡುತ್ತಾ ನಿಂತರು. ಸರ್ದಾರ್ಜಿ, ಕಲರ್ ಹೋಗುತ್ತದೆಯೇ ಎಂದು ಪರೀಕ್ಷೆ ಮಾಡಿದೆ ಎಂದ ಹೆಮ್ಮೆಯಿಂದ!