ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ವೈದ್ಯ : ನೀವು ದಿನ ನಿದ್ದೆ ಮಾಡುವುದಕ್ಕೆ ಮೊದಲು ಹತ್ತು ನಿಮಿಷ ವಾಕಿಂಗ್ ಹೋಗಿ ಬರಬೇಕು.’

 ರೋಗಿ : ನನಗೂ ಅದೃಷ್ಟ. ಆದರೆ ನಮ್ಮ ಆಫೀಸಿನಲ್ಲಿ ಅದಕ್ಕೆಲ್ಲ ಅನುಮತಿ ಇಲ್ವಲ್ಲ.

Join Our Whatsapp Group

***

ಡಾಕ್ಟರ್ : ನೋಡಿ ನೀವು ಬೇಗನೇ ದಪ್ಪ ಆಗಬೇಕು ಅಂತಿದ್ದರೆ ಒಂದು ಸಲಹೆ ಕೊಡ್ತೀನಿ.ಹಣವೂ ಖರ್ಚಾಗೋಲ್ಲ ಶ್ರಮವೂ ಆಗೋಲ್ಲ.

 ಸಣಕಲ ವ್ಯಕ್ತಿ : ಅಯ್ಯೋ ಮತ್ತೆ ಬೇಗ ಏಳಿ ಡಾಕ್ಟ್ರೇ.

 ಡಾಕ್ಟರ್ : ಒಂದೆರಡು ಮೂರು ದಿನ ಭಿಕ್ಷೆ ಬೇಡಿ ಊಟ ಮಾಡಿ.

***

 ಡಾಕ್ಟರ್ : ಕಂಡ ಕಂಡ ಹೆಣ್ಣುಗಳ ಜತೆ ಸುತ್ತೋದು ನಿಲ್ಲಿಸದೆ ಹೋದರೆ ಇನ್ನೊಂದು ವಾರದಲ್ಲಿ ನಿನ್ನ ಪ್ರಾಣಕ್ಕೆ ಆಪತ್ತು…

 ತರುಣ : ಅಯ್ಯೋ ಇದೇನು ಡಾಕ್ಟ್ರೆ?  ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ.

 ಡಾಕ್ಟರ್ : ಅದು ಸರಿ. ನೀನು ಯಾವ ಹೆಣ್ಣುಗಳ ಜತೆ ಸುತ್ತುತ್ತಿದ್ದೀಯೋ ಆ ಹೆಣ್ಣುಗಳ ಪೈಕಿ ಒಬ್ಬಳು ನನ್ನ ಹೆಂಡತಿ!

***

ಡಾಕ್ಟರ್ : ನೋಡಯ್ಯ, ನಿನ್ನ ಹೆಂಡತಿ ಮನಸ್ಸು ಪೂರಾ ಹೊರಟು ಹೋಗಿಬಿಟ್ಟಿದೆ. ಇದನ್ನು ಹೇಳೋಕೆ ನನಗೆ ದುಃಖವಾಗುತ್ತೆ.

 ಆತ: ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋಲ್ಲ, 20 ವರ್ಷಗಳಿಂದ ಇದರ ಬಿಸಿ ಸ್ವಲ್ಪ ಸ್ವಲ್ಪಾನೇ ತಟ್ಟುತ್ತಾ  ಬಂದಿದೆ.