ಒಬ್ಬ ಸರ್ದಾರ್ಜಿ ಒಂದು ಇಂಟರ್ವ್ಯೂಶನ್ ಗೆ ಹೋಗಿದ್ದ ಸಂದರ್ಶನಕ್ಕೆ ಸ್ವಲ್ಪ ಹೊತ್ತಿನಲ್ಲಿ ಒಂದು ಕುರ್ಚಿ ಹಿಡಿದು ವಾಪಸ್ಸು ಓಡಿ ಬಂದ.ಇದೇನ್ರಿ ಇಂಟರ್ವ್ಯೂ ಮುಗಿಯಿತ್ತೇ,? ಕುರ್ಚಿ ಏಕೆ ತಂದಿದ್ದೀರಿ?ಎಂದಳು ಹೆಂಡತಿ.ನನ್ನ ಹೆಸರು ಕರೆದರು Take a Seat ಎಂದರು ಅದಕ್ಕೆ ಕುರ್ಚಿ ತೆಗೆದುಕೊಂಡು ಬಂದೆ ಎಂದ ಸರ್ದಾರಜಿ.
“ ನನ್ನ ಅತ್ತೆಗೆ ಈ ದೀಪಾವಳಿಗೆ 25 ಸಾವಿರದ ಚೆಕ್ಕನ್ನು ಕೊಟ್ಟು ಖುಷಿಪಡಿಸಬೇಕೆಂದಿದ್ದೇನೆ” “ನಿನ್ನ ಬ್ಯಾಂಕ್ ಅಕೌಂಟ್ ನಲ್ಲಿ ಅಷ್ಟು ಹಣ ಇಲ್ಲವಲ್ಲೋ?” “ಗೊತ್ತು ನನ್ನ ಅತ್ತೆ ಮಹಾಜಿಪುಣೆ. ಅವಳು ಈ ಚೆಕ್ ನ್ನು ಬ್ಯಾಂಕಿಗೆ ಕೊಡದೆ ಭದ್ರವಾಗಿ ಬಿರುವಿನಲ್ಲಿಟ್ಟು ಆಗಾಗ ನೋಡಿ ಹಿಗ್ಗುತ್ತಿರುತ್ತಾಳೆ”
ರೋಗಿ : ಡಾಕ್ಟರೇ ಮುಂದೆ ನನ್ನ ಜೀವನದ ಬಗ್ಗೆ ಚಿಂತೆಯಾಗಿಬಿಟ್ಟಿದೆ.
ಡಾಕ್ಟರ್ : ಅದರ ಬಗ್ಗೆ ಚಿಂತಿಸಬೇಡಿ. ಒಂದು ವರ್ಷ ನನ್ನ ಹತ್ರ ಔಷಧಿ ತಗೊಂಡು ಬಿಡಿ ಸಾಕು.
ರೋಗಿ : ಒಂದೊರ್ಷದ ಔಷಧಿಗೆ ಎಷ್ಟಾಗುತ್ತೆ?
ಡಾಕ್ಟರ್ : ಏನ್ ಮಹಾ, ಒಂದೈದು ಸಾವಿರ ಆಗಬಹುದು.
ರೋಗಿ : ಅದು ನಿಮ್ಮ ಭವಿಷ್ಯಕ್ಕಾಯಿತ್ತಲ್ಲ. ನನ್ನ ಬಗ್ಗೆ ಹೇಳಿ.