ನೀನು ದೊಡ್ಡವನಾದ ಮೇಲೆ ಏನಾಗುವೆ ಎಂದು ಅಜ್ಜಮೊಮ್ಮಗನನ್ನು ಪ್ರೀತಿಯಿಂದ ಕೇಳಿದರು.ಮೊಮ್ಮಗ ಅಷ್ಟೇ ಸಂತೋಷದಿಂದ ತಟ್ಟನೆ ಹೇಳಿದ ಅಜ್ಜಾ ನಾನೂ ಬಿಳಿ ತಲೆಯ ಮುದುಕನಾಗಿ, ಕೋಲು ಹಿಡಿದು ನಿನ್ನಂತೆ ನಡೆಯುತ್ತೇನೆ!
****
ಮಗ ಮಾರ್ಕ್ಸ್ ಕಾರ್ಡನ್ನು ನೋಡಿ ಅಪ್ಪ ಬೈದು. ಓದು ಎಂದರೆ ಕೇಳುವುದಿಲ್ಲ, ಈಗ ನೋಡು ಫೇಲಾಗಿದ್ದೀಯಲ್ಲ ಕತ್ತೆ ಎಂದು. ಮಗ ಸಮಾಧಾನದಿಂದಲೇ ಉತ್ತರ ಕೊಟ.ಅಪ್ಪಾ ಯಾವಾಗಲೂ ಕತ್ತೆ ಎಂದು ಬಯ್ಯುತ್ತಿರಲ್ಲ ನಾನಿನ್ನು ಸಣ್ಣವನು ಕತ್ತೆಮರಿ ಎಂದು!
***
ಒಬ್ಬ ಸರ್ದಾರ್ ಜಿಯಿಂದ ಪೊಲೀಸ್ ಸ್ಟೇಶನ್ನಿಗೆ ಫೋನ್ ಬಂದಿತು. ನನ್ನ ಕಾರಿನಲ್ಲಿರುವ ಸ್ಪೀ ಯರಿಂಗ್ ವೀಲ್, ಮ್ಯೂಸಿಕ್ ಸಿಸಸ್ಟ್ಂ ಬ್ರೇಕ್,ಅಸ್ಸಿಲೇಟರ್ ಎಲ್ಲಾ ಕಳುವಾಗಿದೆ ಎಂದು.ಅರ್ಧ ಗಂಟೆಯಲ್ಲಿ ಮತ್ತೆ ಅವನಿಂದಲೇ ಫೋನು ಬಂದಿತ್ತು ಸಾರಿ….ಏನೂ ಕಳುವಾಗಿಲ್ಲ.ನಾನು ಇಂದಿನ ಸೀಟಿನಲ್ಲಿ ಕುಳಿತಿದ್ದೆ ಎಂದು.