ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಒಬ್ಬ ಶ್ರೀಮಂತ ಹೆಂಡತಿಗೆ ಕನ್ನಡ ಮಾತನಾಡಲು ಬರುತ್ತಿದ್ದರೂ, ಬರೆಯಲು ಬರುತ್ತಿರಲಿಲ್ಲ.ಆದರೂ ಕನ್ನಡದಲ್ಲಿ ಬರೆಯುವ ಆಸೆ ಅವಳಿಗೆ.ಗಂಡ ಬೇರೆ ಊರಿಗೆ ಹೋಗಿದ್ದ.ಅವನಿಗೆ ಕಾಗದ ಬರೆದಳು.ಕೊನೆಯಲ್ಲಿ ಅವಳು ಬರೆದದ್ದು,ಇಲ್ಲಿ ಖರ್ಚಿಗೆ ಹಣ ಇಲ್ಲ ದಯವಿಟ್ಟು ಕಳಿಸಿ.ನಿಮ್ಮ ಹೆಣಕ್ಕಾಗಿ ಕಾಯುತ್ತಿದ್ದೇನೆ.ಇಂತಿ ನಿಮ್ಮ ಅರ್ಧಾಂಗಿ ಎಂದು! 

Join Our Whatsapp Group

***

 ಕ್ಯಾಬರೆ ಡ್ಯಾನ್ಸ್ ನೋಡಲು ಹೋಗಿದ್ದ ಮಗನನ್ನು ತಾಯಿ ಸಿಟ್ಟಿನಿಂದ ಕೇಳಿದಳು, “ನೀನು ಅಲ್ಲಿ ನೋಡಬಾರದುದನ್ನೇನಾದರೂ ನೋಡಿದೆಯಾ? ” ಎಂದು. ಮಗ ಉತ್ತರಿಸಿದ,“ಹೌದು, ಅಲ್ಲಿ ಅಪ್ಪನನ್ನು ನೋಡಿದೆ” ಎಂದು!

***

 ತಾಯಿ : ವಾಸು ಬಾರೋ ತಿಂಡೀಗೆ.

 ವಾಸು : ಇರಮ್ಮ ಸ್ವಲ್ಪ ಇವತ್ತು ಅಪ್ಪಂದು ಕ್ರಿಕೆಟ್ ಮ್ಯಾಚಿದೆ ಅದನ್ನ ನೋಡ್ತಾ ಇದ್ದೀನಿ.

 ತಾಯಿ : ಹೇಗಾಡ್ತಾ ಇದ್ದಾರೂ ನಿಮ್ಮಪ್ಪಾ.

 ವಾಸು : ಅಪ್ಪಾ ಒಂದೇ ಸಮನೆ ಸಿಕ್ಸರ್ ಬಾರುಸ್ತಾ ಇದ್ದಾರೆ ಕಣಮ್ಮ

 ತಾಯಿ : ಹಾಗಾದ್ರೆ ನೀನು ನೋಡ್ತಾ ಇರೋದು ಜಾಹಿರಾತ್ ಇರಬೇಕು.