ಜ್ಯೋತಿ : ನಾವಿಬ್ರೂ ಆ ತಾಜ್ ಹೋಟೆಲ್ ಗೆ ಹೋಗೋದು ಬೇಡ. ಬೇರೆ ಯಾವಾದ್ರೂ ಹೋಟೆಲ್ ಗೆ ಹೋಗಣ.
ವಾಸು : ಆ ಹೋಟೆಲ್ ಗೆ ಏಕೆ ಹೋಗಬಾರದು?.
ಜ್ಯೋತಿ : ನಿಂಗೊತ್ತಿಲ್ಲ.ನನ್ನ ಗಂಡ ತನ್ನ ಪ್ರೇಯಸಿಯೊಂದಿಗೆ ಆ ಹೋಟೆಲ್ ಹೋಗಿದ್ದಾನೆ.
***
ವಾಸು : ಮಗೂ, ಇವತ್ತು ಸ್ಕೂಲಿನಲ್ಲಿ ಏನೇನು ಹೇಳಿಕೊಟ್ಟರು?
ಮಗ : ಇವತ್ತು ಏನು ಹೇಳಿಕೊಡಲಿಲ್ಲ.
ವಾಸು : ಹೌದೆ! ಏಕೋ?
ಮಗ :ನಿನ್ನೆ ನೀವು ಹೇಳಿಕೊಟ್ಟ ಲೆಕ್ಕಗಳನ್ನೆಲ್ಲಾ ತಪ್ಪಾಗಿತ್ತು.ಇವತ್ತು ಅದನ್ನೆಲ್ಲಾ ಸರಿ ಮಾಡೋದೇ ಟೀಚರ್ ಗೆ ಸಾಕಾಗಿಹೋಯ್ತು.
***
ಗಂಡ – ಹೆಂಡತಿ ಇಬ್ಬರದು ಬ್ಯಾಂಕಿನಲ್ಲಿ ಜಾಯಿಂಟ್ ಅಕೌಂಟ್ ಇತ್ತು. ಹಣ ಇಟ್ಟಿದ್ದರು. ಗಂಡ ತೀರಿಕೊಂಡ. ಬ್ಯಾಂಕ್ ಅಕೌಂಟ್ ಸರಿಪಡಿಸಲು ಹೆಂಡತಿ ಬ್ಯಾಂಕಿಗೆ ಹೋದಳು. ಅಲ್ಲಿಂದ ಸಣ್ಣ ವಯಸ್ಸಿನ ಗುಮಾಸ್ತ ಕೇಳಿದ “ನೀವಿಬ್ಬರಲ್ಲಿ ತೀರಿಕೊಂಡವರು ಯಾರು? ”