ವಾಸು : ಲೋ ವೆಂಕಿ ಮೊನ್ನೆ ಏನಾಯ್ತು ಗೊತ್ತಾ?
ವೆಂಕಿ : ನೀನು ಹೇಳಿದರೆ ತಾನೆ ಗೊತ್ತಾಗೋದು.
ವಾಸು : ಒಂದು ಕಮಲದ ಹೂವು ಸಿಕ್ತು ಸುಮ್ನೆ ಅದ್ನ ಹಾಳು ಮಾಡಬೇಕಲ್ಲಾ ಅಂತ. ಅದ್ನ ಒಂದು ಹುಡುಗಿಗೆ ಕೊಟ್ಟೆ. ಅವಳು ನನ್ನ ಕಪಾಳಕ್ಕೆ ಬಾರಿಸಿ ಬಿಡೋದೆ. ನಾನದಕ್ಕೆ ನೋಡಮ್ಮ ನಾನು ಬಿ.ಜೆ.ಪಿ. ಪರ ಪ್ರಚಾರ ಮಾಡ್ತಾ ಇದ್ದೀನಿ ಅದಕ್ಕೆ ಕೊಟ್ಟೆ, ಅಂದೆ
ವೆಂಕಿ : ಅದಕ್ಕೆ ಅವಳೇ ನಂದ್ಲು.
ವಾಸು : ನಾನು ಕಾಂಗ್ರೆಸ್ ಪರ ಪ್ರಚಾರ ಮಾಡ್ತಾ ಇದ್ದೇನೆ. ಅದಕ್ಕೆ ಅದರ ಚಿಹ್ನೆ ತೋರಿಸ್ತೆ ಅಂದ್ಲು.
ಟೀಚರ್ : ವಾಸು ನಿನ್ನ ತಂದೆ ಹೆಸರನ್ನ ಇಂಗ್ಲಿಷ್ನಲ್ಲಿ ಹೇಳು.
ವಾಸು : ವೇಲ್ ಬುಲ್ ಫಾದರ್
ಟೀಚರ್ : ಅಂದ್ರೇ?
ವಾಸು : ಚನ್ನಬಸಪ್ಪ
ಟೀಚರ್ : ಹಾಗಾದ್ರೆ ನಿಮ್ಮ ತಾಯಿಯ ಹೆಸರು?
ವಾಸು : ರೈಸ್ ಫುಲ್
ಟೀಚರ್ : ಅಂದರೇ?
ವಾಸು : ಅಂದರೆ, ಅನ್ನಪೂರ್ಣ.
***
ಬಾಸ್ : ಏನ್ರೀ ಬಂದದ್ದು?
ವಾಸು : ನಿಮ್ಮ ಕಚೇರಿಯಲ್ಲಿ ನನಗೆ ಏನಾದರೂಂದು ಕೆಲಸ ಕೊಡಿ ಸರ್.
ಬಾಸ್ : ಕೆಲಸ ಕೊಡ್ತೀನಿ ಆದ ಮಾಡಲಾಗುತ್ತಾ?
ವಾಸು : ಏನು ಕೆಲಸ ಹೇಳಿ ಸರ್ ಮಾಡ್ತೀನಿ.
ಬಾಸ್ : ಇತರರಿಂದ ಮಾಡಲಾರದ ಕೆಲಸ ನಿನ್ನಿಂದ ಮಾಡಲು ಸಾಧ್ಯವೇ?
ವಾಸು : ಸಾಧ್ಯ ಸರ್.
ಬಾಸ್ : ಯಾವ ಕೆಲಸ?
ವಾಸು : ನನ್ನ ಬರವಣಿಗೆ ಬೇರೆಯವರು ಓದಲು ಸಾಧ್ಯವಿಲ್ಲ ಅದನ್ನು ನಾನೇ ಓದುತ್ತೇನೆ ಸರ್.