ಮಾಲೀಕ : ಹೋದ ತಿಂಗಳು ಕೆಲಸ ಕೇಳಿಕೊಂಡು ಬಂದವನು ನೀನು ಅಲ್ವೇ?
ವಾಸು : ಹೌದು ಸ್ವಾಮಿ.
ಮಾಲೀಕ : ಸ್ವಲ್ಪ ದೊಡ್ಡ ಹುಡುಗ ಬೇಕೂ ಅಂತ ಅವತ್ತೇ ಹೇಳಿದ್ನಲ್ಲ ಮತ್ತೇಕೆ ಬಂದೆ
ವಾಸು : ಈಗ ನನ್ನ ವಯಸ್ಸು ಒಂದು ತಿಂಗಳು ಜಾಸ್ತಿಯಾಗಿದೆ ಸ್ವಾಮಿ.ಅದಕ್ಕೆ ಬಂದೆ.
ವೆಂಕಿ : ವಯಸ್ಸಾದ್ಮೇಲೆ ಹೆಂಡ್ತಿ ಹೇಳಿದ್ದು ಕೇಳಿದೆ ಇದ್ರೆ ಏನಾಗುತ್ತೇ?
ವಾಸು : ನಿನಗೆ ಕಿವಿ ಕೇಳೊಲ್ಲಾ ಅಂತ ಡಾಕ್ಟರ್ ಹತ್ರ ಕರ್ಕೊಂಡು ಹೋಗ್ತಾಳೆ ಅಷ್ಟೇ.
ಶಿಕ್ಷಕ : ವಾಸು ಯಾಕೋ ತಡವಾಗಿ ಕ್ಲಾಸಿಗೆ ಬಂದೆ
ವಾಸು : ಅಲ್ಲೊಂದು ಆನೆ ಸತ್ತಿತ್ತು ಗುರುಗಳೇ ಅದ ಮುಟ್ಟಿ ನಮಸ್ಕರಿಸಿ ಕಣ್ಣೀರು ಸುರಿಸಿ ಬಂದೆ.?
ಶಿಕ್ಷಕ : ಅಲ್ವೋ ಸತ್ತೋರ್ನ ತಬ್ಬಿಕೊಂಡು ಅಳ್ತಾರೆ. ನೀನು ಮುಟ್ಟಿ ಬಂದೆ ಅಂತೀಯ?
ವಾಸು : ಅದು ಆನೆ ಸರ್. ಅದನ್ನ ತಬ್ಬಿಕೊಳ್ಳೋಕಾಗ್ಲಿಲ್ವಲ್ಲಾ ಅಂತ್ಲೇ ನಾನು ಅತ್ತಿದ್ದು.