ಮೇಡಂ : ವಾಸು ಬೆಳಗಿಂದ ಏನು ತಿಂದಿಲ್ಲ ಸ್ವಲ್ಪ ಅನ್ನ ಕೊಡಿ.
ವಾಸು : ಇನ್ನು ಅಡಿಗೆಯಾಗಿಲ್ಲಪ್ಪ.
ಬಿಕ್ಷುಕ : ಹಾಗಾದ್ರೆ ಅಡುಗೆ ಆದ್ಮೇಲೆ ಒಂದು ಕಾಲ್ ಮಾಡಿ.
ವಾಸು ,: ಲೋ ಸುಬ್ಬಾ “ಸರ್ಕಾರದ ಕೆಲಸವೇ ದೇವರ ಕೆಲಸ ”ಅಂತ ಉಕ್ತಿಯಿದೆಯಲ್ಲ ಅದರಲ್ಲಿ ನಾನೊಂದು ವಿಶೇಷ ಅರ್ಥ ಕಂಡ್ಕೊಂಡೆ.
ವೆಂಕಿ : ಅದು ಯಾವುದಯ್ಯಾ?
ವಾಸು : ದೇವರ ಪೂಜೆಗೆ ಹೇಗೆ ದಕ್ಷಿಣ ತೆಗೆದುಕೊಳ್ತೀವೋ ಹಾಗೆ ಇಲ್ಲೂ ದಕ್ಷಿಣೆ ತಗೋಬಹುದೂ ಅಂತ.
ವಾಸು : ನೋಡಿ ನಾನು ಸ್ವಲ್ಪ ಕಚೇರಿ ಒಳಗೆ ಹೋಗಿಬರ್ತೀನಿ.ಅಲ್ಲಿವರೆಗೆ ನನ್ನ ಬೈಕನ್ನು ಸ್ವಲ್ಪ ನೋಡಿಕೊಳ್ಳುತ್ತೀರಾ?
ಬಾಸ್ : ನನ್ನ ಯಾರೂ ಅಂತ ತಿಳ್ಕೊಂಡ್ರಿ ನಾನು ಈ ಕಛೇರಿ ಬಾಸ್.
ವಾಸು : ಒಳ್ಳೆಯದೇ ಆಯಿತು, ನಿಮ್ಮೇಲೆ ನನಗೆ ನಂಬಿಕೆ ಇದೆ ಎಂದು ಒಳನಡೆದ.