ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ವೆಂಕಿ : ನಾನೊಂದು ಹುಡುಗಿನ ಪ್ರೀತಿಸುತ್ತಾ ಇದ್ದೀನಿ.ಆಕೆಗೆ ಒಂದು ಮುತ್ತು ಕೊಡೋಣಾ ಅಂತ ಇದ್ದೀನಿ. ಅದಕ್ಕೊಂದು ಸೂಕ್ತವಾದ ಜಾಗ ಹೇಳೋ?

 ವಾಸು : ಅದಕ್ಕೆ ಸುಕ್ತವಾದ ಜಾಗವೆಂದರೆ ದೇವಾಲಯ.

 ವೆಂಕಿ : ಅಲ್ಲೇ ಏಕೆ

 ವಾಸು : ಅಲ್ಲಿಗೆ ಅವಳು ಚಪ್ಪಲಿ ಹಾಕ್ಕೊಂಡು ಬಂದಿರುವುದಿಲ್ಲ ಅದಕ್ಕೆ.

Join Our Whatsapp Group

**

 ವಾಸು : ಜ್ಯೋತಿ, ನಾನು ನಿನ್ನ ಪ್ರೀತಿಸೋ ವಿಚಾರ ಯಾರ ಕೈಲೂ ಹೇಳಬೇಡ.

 ಜ್ಯೋತಿ : ಯಾರ ಕೈಲೂ ಹೇಳೋದಿಲ್ಲ ಆದರೆ ನಮ್ಮಮ್ಮನ ಕೈಲಿ ಹೇಳಲೇಬೇಕು.

 ವಾಸು : ಯಾಕೆ ಹೇಳಬೇಕು?

 ಜ್ಯೋತಿ : ನಮ್ಮಮ್ಮ ಯಾವಾಗ್ಲೂ ಹೇಳ್ತಾನೆ ಇರ್ತಾಳೆ.

 ಜ್ಯೋತಿ : ಯಾವ ಹುಚ್ಚ ನಿನ್ನ ಪ್ರೀತಿಸುತ್ತಾನೆ ಅಂತ.

***

 ವೆಂಕಿ : ವಾಸು ಕ್ಯಾಂಡಲ್ ಯಾಕೆ ಹಚ್ಚುತ್ತೀಯಾ?

 ವಾಸು : ಅಯ್ಯೋ ಗುಲ್ಡೂ,ಅಷ್ಟೂ ಗೊತ್ತಿಲ್ವೇನೋ? ಕರೆಂಟೇ ಇಲ್ಲಾ ಯಾಕೆ?

 ವೆಂಕಿ : ಸರಿ ಹಾಗಾದರೆ ಬಾರಿ ಶಖೆಯಾಗ್ತಾ  ಇದೆ ಫ್ಯಾನ್ ಸ್ವಿಚ್ಚಾದ್ರೂ  ಹಾಕು.

 ವಾಸು : ಅಯ್ಯೋ ಗುಲ್ಡೂ, ಫ್ಯಾನ್ ಹಾಕಿದ್ರೆ ಕ್ಯಾಂಡಲ್ ಆರಿ ಹೋಗುತ್ತದೆ ಅದೂ ಗೊತ್ತಿಲ್ವೇ?