ವಾಸು : ವೆಂಕಿ, ಈಗ ನಿನ್ನ ಹೆಂಡ್ತಿ ಹೇಗಿದ್ದಾಳೆ?
ವೆಂಕಿ : ಅದ್ನ ಏನಂತಾ ಹೇಳಲಿ ಹೇಳು?
ವಾಸು : ಅದೇನೊ ಅಂತ ಸರಿಯಾಗಿ ಹೇಳು?
ವೆಂಕಿ : ಒಟ್ಟುಒಂದು ಎರಡು ಮಾತು ಅಂದೆ ಅಷ್ಟಕ್ಕೆ ಡ್ರೈವರ್ಸ್ ತಗೊಂಡು ಹೊರಟೋದ್ಲು.
ವಾಸು : ಹೌದೇ!ನೀನಂದ ಆ ಎರಡು ಮಾತು ಯಾವುದು ಹೇಳು,ನನಗೂ ಬೇಕಾಗುತ್ತೆ.
***
ಜೈಲರ್ : ನಿನ್ನ ನೋಡೋಕೆ ನಿಮ್ಮ ಕಡೆಯವರಾರೂ ಜೈಲಿಗೆ ಬರಲಿಲ್ಲ ಏಕೆ?
ವಾಸು : ನನ್ನ ಬಂಧುಗಳೆಲ್ಲಾ ಇಲ್ವೇ ಇರಬೇಕಾದರೆ ಬೇರೆ ಯಾರು ಬರಲು ಸಾಧ್ಯ.
****
ತಾಯಿ : ಲೋ ವಾಸು, ಪಕ್ಕದ್ಮನೆ ಹುಡುಗಿ ನೋಡು ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದಾಳೆ.ಅವಳನ್ನು ನೋಡಿ ಕಲ್ತುಕೋ.
ವಾಸು : ಸಾಕು ಸುಮ್ನಿರಮ್ಮ.
ತಾಯಿ : ಯಾಕೋ ನಾನು ಹೇಳಿದ್ದು ಸರಿಯಲ್ವೇನೋ?
ವಾಸು : ಆ ಪಕ್ಕದ್ಮನೆ ಹುಡ್ಡುಗಿ ನೋಡೇ ನೋಡಿ ನೋಡೇ ನಾನು ಫೇಲಾದದ್ದು ಮತ್ತೂ ನೋಡೂ ಅಂತಿಯಲ್ಲ.