ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೆಂಕಿ : ಇದೇನೋ ವಾಸು, ಸೈಕಲ್ ಬ್ರೇಕ್ ಕೈನಲ್ಲಿ ಹಿಡ್ಕೊಂಡಿದು ಡ್ಯಾನ್ಸ್ ಮಾಡ್ತಾ ಇದ್ದೀಯ?
ವಾಸು : ಅಷ್ಟೂ ಗೊತ್ತಾಗ್ತಿಲ್ವೇನೋ, ಗುಗ್ಗೂ ಇದು ಬ್ರೇಕ್ ಡ್ಯಾನ್ಸ್.

Join Our Whatsapp Group

ಬಾಲು : ಯಾಕೋ ವಾಸು, ಮನೆ ಬಾಗಿಲು ತೆರೆದುಕೊಂಡೇ ಮಲಗಿದ್ದೀಯ?ಕಳ್ಳ ಬಂದ್ರೆ?
ರವಿ : ಬಾಗಿಲು ಹಾಕಿದ್ರೆ ಕಳ್ಳ ಬಂದು ಬಾಗಿಲು ಒಡೆದು ಹಾಳು ಮಾಡುತ್ತಾನೆ.ಹಾಗಾಗಬಾರದು ಅಂತ ಬಾಗಿಲು ತೆರೆದೆ ನಾನು ಮಲಗೋದು.

ಆತ : (ರಸ್ತೆಯಲ್ಲಿ) ಇದೇನಯ್ಯ ಈ ಡಾಕ್ಟರು ರಸ್ತೆಯಲ್ಲಿ ಹೋಗುವಾಗಲೂ ಕಿವಿಗೆ ಸೆಥೋಸ್ಕೋಪಿಕ್ ಅಂಟಿಸಿಕೊಂಡಿದ್ದಾರೆ.
ಈತ : ಓಹ್!ಅವರಿಗೆ ಕ್ಲಿನಿಕ್ ತೆಗೆಯೋಕೆ ಎಲ್ಲೂ ಸ್ಥಳ ಸಿಕ್ಕಿಲ್ಲ.ಅದಕ್ಕೆ ಸಂಚಾರಿ ಕ್ಲಿನಿಕ್ ಎಂದು ಹೇಳಿಕೊಂಡು ತಿರುಗುತ್ತಾ ಇರುತ್ತಾರೆ.
ವೆಂಕಿ : ಏನು ವಾಸು ಎಲ್ಲಿಗೋ ಹೀಗೆ ಓಡ್ತಾ ಇದ್ದೀಯ
ವಾಸು : ಅರ್ಜೆಂಟಾಗಿ ಈ ಕಾಗದ ಪೋಸ್ಟ್ ಮಾಡಬೇಕು.
ವೆಂಕಿ : ಕಾಗದ ಎಲ್ಲಿಗೆ ಬರೆದಿದೀಯಾ
ವಾಸು : ಹೇಳೋಕೆ ಸಮಯ ಇಲ್ಲ.ತಗೋ ಕಾಗದ ನೀನೇ ನೋಡ್ಕೋ.
ವೆಂಕಿ : ಅರೆ ಅಡ್ರೆಸ್ ಬರೆದಿಲ್ವಲ್ಲೋ.
ವಾಸು : ಅಡ್ರೆಸ್ ಬರಿಯೋಕೆ ಸಮಯವಿಲ್ಲ ಕೊಡಿಲ್ಲಿ ಬೇಗ ಪೋಸ್ಟ್ ಮಾಡ್ತೀನಿ.