ವೆಂಕಿ : ವಾಸು ಪಿಡಬ್ಲ್ಯೂಡಿ ಆಫೀಸ್ನಲ್ಲಿ ಅಲ್ವಾ ಕೆಲಸ ಮಾಡ್ತಾ ಇದ್ದುದ್ದು ಅದೇಕೆ ನಿನ್ನ ಡಿಸ್ ಮಿಸ್ ಮಾಡಿದ್ರು?
ವಾಸು : ಯಾವುದೋ ಒಂದು ಸುಳ್ಳು ಲೆಕ್ಕ ಬರೆದಿದ್ದೆ.
ವೆಂಕಿ : ನಿನ್ನ ಕೆಲಸದಿಂದ ತೆಗೆದುಹಾಕೋ ಅಂಥ ಸುಳ್ಳು ಲೆಕ್ಕ ಏನೋ ಯಾವ್ದಪ್ಪ?
ವಾಸು : ರೋಡ್ ರೋಲರ್ ವೀಲ್ ಪಂಚೇರಾಗಿದೇ ಅಂತ ಬರೆದು ದುಡ್ಡು ತಗೊಂಡಿದ್ದೆ.
ವಾಸು : ಲೋ ಸುಬ್ಬಾ,. ನಾವು ಜನಸಂಖ್ಯೆ ನಿಯಂತ್ರಣ ಮಾಡೋಣ.
ವೆಂಕಿ : ಹೇಗೆ ಮಾಡ್ತೀಯ?
ವಾಸು : ನಾವು ಮದುವೆಯಾಗೋದು ಬೇಡ. ನಮ್ಮ ಮಕ್ಕಳಿಗೂ ಮದುವೆ ಮಾಡಬಾರದು. ಏನಂತೀಯಾ.?
ವಾಸು : ಡಾಕ್ಟರ್ ನನಗೆ ದೃಷ್ಟಿ ದೋಷ ಇದೇ ಅಂತಾರೆ ಕನ್ನಡಕದ ಅವಶ್ಯಕತೆ ಇದೆಯೇ?
ಅಂಗಡಿಯವ : ಖಂಡಿತಾ ಇದೆ.
ವಾಸು : ನೀವು ಡಾಕ್ಟ್ರೇ?
ಅಂಗಡಿಯವ : ಅಲ್ಲಾ.
ವಾಸು : ನನಗೆ ಕನ್ನಡಕ ಬೇಕೂ ಅಂತ ನೀವು ಹೇಗೆ ಹೇಳಿದಿರಿ?
ಅಂಗಡಿಯವ : ಏಕೆಂದರೆ ಈಗ ನೀವು ಬಂದಿರೋದು ಷೇವಿಂಗ್ ಷಾಪಿಗೆ.