ಡೈರೆಕ್ಟರ್ : ಏನಮ್ಮ ಡ್ಯಾನ್ಸ್ ಮಾಡುವಾಗ ಸರಿಯಾಗಿ ಸೊಂಟ ಕುಣಿಸು ಅಂದ್ರೆ ಬರೇ ಕಾಲು ಕುಣಿಸ್ತಾ ಇದ್ದೀಯ.
ನಟಿ : ಪೇಮೆಂಟ್ ಕೊಡದೇ ಇದ್ರೆ ಬರೇ ಕಾಲೆ ಕುಣಿಯುತ್ತೆ ಸಾರ್.ಪೇಮೆಂಟ್ ಕೊಡಿ ಸೊಂಟಾನೂ ಕುಣಿಯುತ್ತೆ.
ಶಾಮ : ನೀವು ನಿಮ್ಮ ಹೆಂಡ್ತೀನ ಹೊಡೀತಿದ್ರಂತೆ! ಹೌದ್ರೇನ್ರೀ?
ಶಂಕರ್ ರಾವ್ : ನನ್ನ ಹೆಂಡ್ತಿನ ನಾನು ಹೊಡೀತೀನಿ. ಆದ್ದರಿಂದ ನಿಮಗೇನ್ರೀ ಕಷ್ಟ?
ಶಾಮ : ಅಲ್ಲ,ನಿಮಗೆ ಅಷ್ಟು ಧೈರ್ಯ ಹೇಗೆ ಬಂತು ಅಂತ…. ನಮಗೂ ಸ್ವಲ್ಪ ಹೇಳಿಕೊಡಿ.
***
ದಾರಿಯಲ್ಲಿ ಮೆತ್ತೆನೆ ಮಾತಿನಲ್ಲಿ ಒಬ್ಬ ಕೇಳಿದ : “ಸ್ವಾಮಿ, ಹತ್ತಿರದಲ್ಲೇ ಪೊಲೀಸಯರಾದರೂ ಇರುವರೆ? “
“ನಾನಂತೂ ಪೊಲೀಸರನ್ನು ಇಲ್ಲೆಲ್ಲೂ ಕಂಡದ್ದೇ ಇಲ್ಲ. ಅವರು ಈ ರಸ್ತೆಯಲ್ಲಿ ಬರುವುದೇ ಇಲ್ಲ”
“ ಹಾಗಿದ್ದಲ್ಲಿ ಕೂಡಲೇ ನಿಮ್ಮ ಕೈ ಉಂಗುರ ಹಾಗೂ ವಾಚುಕೊಟ್ಟು ನಂತರ ಕಿಸೆಯಲ್ಲಿದ್ದ ಹಣವನ್ನೆಲ್ಲ ನನಗೆ ಕೊಡಿರಿ.ಇಲ್ಲವಾದರೆ……”