ಸುಮ : ರಾಧಾಮ ಗಂಡ ಕುಡ್ಕೋಂಡ್ ಬರ್ತಾನೆ ಅಂತ ಅವರು ಮನೆಯಲ್ಲಿ ದಿನಾ ಜಗಳ ಇರ್ತತ್ತಲ್ಲ.ಈಗ ಎಲ್ಲಾ ತಣ್ಣಗಾಗಿದೆ ಹೇಗೆ?
ರಾಣಿ : ರಾಧನ ಗಂಡ ಕುಡಿಯಕ್ಕೆ ಹೋಗುವಾಗ ರಾಧಾನ್ನೂ ಕರ್ಕೊಂಡು ಹೋಗ್ತಾರಂತೆ. ಈಗ ಇಬ್ಬರು ಕುಡ್ಕೊಂಡ್ ಬರ್ತಾರೆ ಹಾಗಾಗಿ ಜಗಳ ಇಲ್ಲ.
***
ಗೌರಿ : ಅಕ್ಕಿ ತೆಗೆದುಕೊಂಡು ಬನ್ನಿ ಅಂದ್ರೆ, ಅಕ್ಕಿ ಹಿಟ್ಟು ತಂದಿದ್ದೀರಲ್ಲಾ ಏನು ಹೇಳಲಿ ನಿಮ್ಮ ಬುದ್ಧಿಗೆ ?
ರಾವ್ : ಅಕ್ಕಿ ಬಿಸ್ಕೊಂಡು ಬನ್ನಿ ಅಂತಾ ಮತ್ತೆ ನನ್ನನ್ನು ಕಳಿಸ್ತೀಯಾ ತಾನೆ,? ಅದಕ್ಕೆ ಅಕ್ಕಿಹಿಟ್ಟು ತಂದುಬಿಟ್ಟೆ!
***
ಕಮಲಮ್ಮ : ನಿಮ್ಮ ಈ ಸೀರೆ ತುಂಬಾ ಸೊಗಸಾಗಿದೆ.ಇದಕ್ಕೆ ಬೆಲೆ ಯೆಷ್ಟು?
ವಿಮಲಮ್ಮ : ಒಂದೇ ಒಂದು ಮುತ್ತು!
ಕಮಲಮ್ಮ : ಒಂದೇ ಮುತ್ತನ್ನು ನೀವು ನಿಮ್ಮ ಪತಿಗೆ ಕೊಟ್ಟದ್ದಕ್ಕೆ ಇಷ್ಟೊಂದು ಬಾರಿ ಸೀರೆ !
ವಿಮಲಮ್ಮ : ನಾನು ಕೊಟ್ಟಿದ್ದಕ್ಕಲ್ಲ ನನ್ನ ಪತಿ ನಮ್ಮ ಆಫೀಸಿನ ನೌಕರರಿಗೆ ಒಂದು ಮುತ್ತನ್ನು ಕೊಟ್ಟಿದ್ದನ್ನು ನಾನು ಕಂಡಿದ್ದಕ್ಕೆ….