ಮನೆ ಹಾಸ್ಯ ಹಾಸ್ಯ

ಹಾಸ್ಯ

0

ತಂದೆ ತನ್ನ ಚಿಕ್ಕ ಮಗನಿಗೆ ಬುದ್ಧಿಯ ಮಾತನ್ನು ಹೇಳುತ್ತಿದ್ದ, “ಮಗು ನೀನು ಶಾಲೆಯಲ್ಲಿ ಮಕ್ಕಳ ಪೆನ್ಸಿಲನ್ನು ಕದಿಯಬಾರದು. ನಿನಗೆ ಪೆನ್ಸಿಲ್ ಬೇಕಿದ್ರೆ ನಾನು ನಿನಗೆ ಅದನ್ನು ನಮ್ಮ ಆಫೀಸಿನಿಂದ ತಂದುಕೊಡುವೆ!!”

Join Our Whatsapp Group

ಸ್ಕೂಲಿಗೆ ಹೊಸ ಟೀಚರ್ ಬರುತ್ತಾರೆ.
ಮುನ್ನಾ : ಮಿಸ್, ನಿಮಗೆ ಮದುವೆ ಆಗಿದ್ಯಾ?
ಟೀಚರ್ : ಇದು ಅತಿಯಾಯಿತು. ನಾಳೆ ನಿಮ್ಮ ಅಪ್ಪನನ್ನು ಕರ್ಕೊಂಡು ಬಾ…..
ಮುನ್ನಾ : ಆಗಲ್ಲ ಮಿಸ್, ನಮ್ಮಪ್ಪನಿಗೆ ಆಗಲೇ ಮದುವೆಯಾಗಿದೆ…..

ಪ್ರವಾಸಿ ತಾನು ತಂಗಿದ್ದ ತಂಗು ದಾಣದ ಒಡತಿಗೆ ಹಿಂದೆ ನಾನು ಇದ್ದ ಮನೆಯನ್ನು ಬಿಟ್ಟು ಬಂದಾಗ ಅಲ್ಲಿನ ಒಡತಿ ನಿಜಕ್ಕೂ ದುಃಖಗೊಂಡಿದ್ದಳು ಎಂದಾಗ,
ಹೊಸ ತಂಗುದಾಣದ ಒಡತಿ ನಾನು ಹಾಗಲ್ಲಪ್ಪ. ನಾನು ಯಾವಾಗಲೂ ಮೊದಲೇ ಬಾಡಿಗೆಯನ್ನು ವಸೂಲಿ ಮಾಡಿ ಬಿಡುತ್ತೇನೆ.