ಶಿಕ್ಷಕ : ರಾಮನು ಕೊಡೆ ಹಿಡಿದು ಹೊರಗೆ ಹೋದನು. ಇದು ಯಾವ ಕಾಲ?
ಒಬ್ಬ ವಿದ್ಯಾರ್ಥಿ : ಮಳೆಗಾಲ ಸರ್!
ಇನ್ನೊಬ್ಬ ವಿದ್ಯಾರ್ಥಿ : ಅಲ್ಲ ಸಾರ್, ಅದು ಬೇಸಿಗೆ ಕಾಲ!
ಮುನ್ನಾ: ತಾಯಿ ಗ್ರೇಟೋ ಅಥವಾ ಪಾಠ ಮಾಡುವ ಶಿಕ್ಷಕರು ಗ್ರೇಟೋ?
ಜಗ್ಗು ಶಿಕ್ಷಕರೇ ಗೇಟ್. ಯಾಕೆಂದರೆ ತಾಯಿ ಕೇವಲ ಒಂದು ಮಗುವಿಗೆ ಮಾತ್ರ ನಿದ್ರೆ ಮಾಡಿಸಬಲ್ಲಳು. ಆದರೆ ಶಿಕ್ಷಕರಾದವರು ಕ್ಲಾಸಿನಲ್ಲಿರುವ ಎಲ್ಲಾ ಮಕ್ಕಳಿಗೂ ಒಂದೇ ಬಾರಿಗೆ ನಿದ್ರೆ ಮಾಡಿಸುತ್ತಾರೆ!
ರೋಗಿಯೊಬ್ಬ ದಾರುಣ ಅವ್ಯವಸ್ಥೆಯಲ್ಲಿ ಡಾಕ್ಟರ್ ನಾಗೇಶ್ ರನ್ನು ಕಾಣಲು ಬಂದಿದ್ದ.
ಡಾಕ್ಟರ್ ನಾಗೇಶ್ : ಅಲ್ರಿ, ಆ ನಾಟಿ ಡಾಕ್ಟರ್ ನರಸಿಂಹನಿಗೆ ಏನ್ರೀ ಗೊತ್ತು? ಅವನು ನಿಮ್ಮ ಪ್ರಾಣ ಹೇಗೋ ಸಲಹೆ ಸೂಚನೆಗಳೇ ಕೊಡುವುದು, ಏನಂದ ಅವನು? ” ಎಂದು ಕೇಳಿದರು.
ರೋಗಿ ತಮ್ಮ ಹತ್ರಕ್ಕೆ ಹೋಗು ಅಂದರು ಸರ್.