ರಮಾ : ರೀ, ನನ್ನ ಕಂಡ್ರೆ ನಿಮಗೆ ಅದೆಷ್ಟು ಪ್ರೀತಿ!ಎಂದು ಗಂಡನ ತೆಕ್ಕೆಯಲ್ಲಿಪಿಸುಗುಟ್ಟಿದಳು. ನಾನು ಮುದುಕಿ ಆದ ಮೇಲೂ ನನ್ನ ಹೀಗೇ ಪ್ರೀತಿಸುತ್ತೀರಾ?
ಗಂಡ : ಈಗಾಗ್ಲೇ ಹತ್ತು ವರ್ಷದಿಂದ ಅದೇ ಮಾಡ್ತಿದ್ದೀನಿ ಚಿನ್ನ.
ಅಧಿಕಾರಿ : ಸರ್ಕಾರಿ ಕಚೇರಿಲಿ ಲಂಚ ಹರಿದಾಡ್ದೇ ಇರೋದಕ್ಕೆ ನೀವು ಯಾವ ಉಪಾಯ ಸೂಚಿಸ್ತೀರ?
ಅಭ್ಯರ್ಥಿ : ಲಂಚಾನ ಅಧಿಕಾರ ಅಕೌಂಟ್ ಗೆ ಕಟ್ಟಿ ಚಲನ್ ಲಗತ್ತಿಸಿ ಅಂತ ಹೇಳ್ತೀನಿ.
ಅಯ್ಯ : ಒಂದು ನೂರು ರೂಪಾಯಿ ಸಾಲ ಕೊಡ್ತೀರಾ?
ರಾವ್ : ಸಾಲಾನಾ ಯಾಕೆ?
ಅಯ್ಯ : ವಿಷಾ ತಗೊಂಡು ಸಾಯೋಕೆ?