ಜಗ್ಗು ಮನೆಯ ಕರೆಂಟ್ ಪ್ಲಗ್ಗಿನಲ್ಲಿ ಹೊಗೆ ಬರುತ್ತಾ ಇತ್ತು.ನೋಡಿ ಸಿಟ್ಟಾಗ ಜಗ್ಗು ಕೆಇಬಿ ಆಫೀಸಿಗೆ ಫೋನ್ ಮಾಡಿ
“ನಿಮ್ಮ ಆಫೀಸಿನಲ್ಲಿ ಸಿಗರೇಟ್ ಸೇದಿ ನಮ್ಮ ಮನೆಯ ಪ್ಲಗ್ಗಿನಲ್ಲಿ ಹೋಗೆ ಬಿಡ್ತಾ ಇರೋದು ಯಾರ್ರೀ?ಎಂದು ಆವಾ ಹಾಕಿದ!!
ತಂದೆ : ಡಾಕ್ಟ್ರೇ ನನ್ನ ಮಗ 10 ಪೈಸೆ ನಾಣ್ಯ ನುಂಗಿಬಿಟ್ಟಿದ್ದಾನೆ. ದಯವಿಟ್ಟು ಏನಾದರೂ ಮಾಡಿ.
ಡಾಕ್ಟರ್ : ನೀವೇನೂ ಚಿಂತಿಸಬೇಡಿ ಸರ್. ಈಗಿನ ಕಾಲದಲ್ಲಿ 10 ಪೈಸೆ ನಾಣ್ಯಕ್ಕೆ ಬೆಲೆಯೇ ಇಲ್ಲ.
ಗಂಡ ಹೆಂಡತಿ ಜಗಳವಾಡಿ ಸುಸ್ತಾಗಿದ್ದರು. ಬಾಗಿಲು ಸದ್ದಾಯಿತು. ಗಂಡನ ಕಡೆಯ ಬಂಧುವೊಬ್ಬರು ಬಂದಿದ್ದರು.
ಬಂಧು ಇದ್ದಾನಾಮ್ಮ ನಿನ್ನ ಗಂಡ?
ಮಡದಿ ಹೂ ಇನ್ನೂ ಇದ್ದಾರೆ!ಎಂದು ನಿಟ್ಟುಸಿರು ಬಿಟ್ಟಳು.