ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಪೊಲೀಸ್ : ನೀನು ಅವರತ್ರ 5 ಲಕ್ಷ ರೂಪಾಯಿ ದರೋಡೆ ಮಾಡಿದ್ದು ನಿಜಾನಾ?
ಕಳ್ಳ : ನಾನು ದರೋಡೆ ಮಾಡಲಿಲ್ಲ ಅವರೇ ಕೊಟ್ರು
ಪೊಲೀಸ್ : ಅವರೇ ಕೊಟ್ರಾ?ಅದು ಹೇಗೆ?
ಕಳ್ಳ : ಚಾಕು ಪಿಸ್ತೂಲ್ ತೋರಿಸಿದೆ.

Join Our Whatsapp Group

ಡಾಕ್ಟರ್ : ಜೀವನದಲ್ಲಿ ಹೆಚ್ಚು ಹೆಚ್ಚು ನಗುತ್ತ ಇರಬೇಕು ಅಂತ ನಾನು ಹೇಳಿದ್ನಲ್ಲ.
ಸೀತ : ನಿಮ್ಮ ಮಾತು ಕೇಳಿದ್ದಕ್ಕೆ ಪಕ್ಕದ್ಮನೆಯವರು ನನ್ನ ಜೊತೆ ಮಾತು ಬಿಟ್ಟಿದ್ದಾರೆ.
ಡಾಕ್ಟರ್ : ಯಾಕೆ?
ಸೀತ : ನಿನ್ನೆ ಅವರ ನಮ್ಮ ಮನೆ ಮುಂದೆ ಕಾಲುಜಾರಿ ಬಿದ್ರು ನಾನು ನಕ್ಕೆ ಅದಕ್ಕೆ.

ಜಾರ್ಜ್ : ಅಲ್ಲಯ್ಯ ಸಾಲ ವಾಪಸ್ ಕೇಳೋಕೆ ಬಂದೋನಿಗೆ ನಾಳೆ ಬಾ ಅಂತ ಯಾಕೆ ಹೇಳಿಕಳಿಸಿದೆ?
ರಾಬರ್ಟ್ : ನಾಳೆ ಬಂದಾಗ ಬಯ್ಯೋಕೆ.
ಚಾರ್ಜ್ : ಹೇಗೆ?
ರಾಬರ್ಟ್ : ನಾಳೆ ಬಾ ಅಂದ್ರೆ ಇವತ್ತೇ ಬಂದಿದೀಯಲ್ಲಯ್ಯ ಅಂತ.
ಮೋಹನ : ಕಾಳಿದಾಸನಿಂದು ಬದುಕಿದ್ದರೆ ಎಲ್ಲರೂ ಅವನನ್ನು ನೋಡಲು ಬರುತ್ತಿದ್ದರು.
ಗುಂಡ : ಹೌದು ಸಂದೇಹವೇ ಇಲ್ಲ 600 ವರ್ಷಕ್ಕಿಂತಲೂ ಹೆಚ್ಚು ಕಾಲ ಬದುಕಿದ ಮನುದುಷ್ಯನೆಂದು ಎಲ್ಲರೂ ಬಂದು ನೋಡುತ್ತಿದ್ದರು.