ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸೋಮು : ರೀ ಸರಳಾ… ನಿಮ್ಮತ್ರ ಏನಾದರೂ ಹೇಳೋದು ಒಂದೇ. ಕಹಳೆ ಬಾಯಿಗೆ ಮುತ್ತು ಕೊಡೋದು ಒಂದೇ.
ಸರಳ : ಕಹಳೆ ಬಾಯಿಗೆ ಯಾಕ್ಸಾರ್ ನಾನೇ ಇಲ್ವ?

Join Our Whatsapp Group

ರಾಮಯ್ಯ : ನನ್ನ ಮಗಳಿಗೆ ಒಂದು ಒಳ್ಳೆಯ ಗಂಡು ಕರಕೊಂಡು ಬಾ ಮತ್ತೆ.
ಗೋವಿಂದ : ಒಳ್ಳೆಯ ಗಂಡುಗಳು ಸಿಗುವುದೇನೋ ಕಷ್ಟ ಇಲ್ಲ.
ರಾಮಯ್ಯ : ಕರ್ಕೊಂಡು ಬಾ ಮತ್ತೆ
ಗೋವಿಂದ : ಅಂದ್ರೆ ಅವರೆಲ್ಲ ಒಳ್ಳೆ ಹೆಣ್ಣು ಬೇಕು ಅಂತ ಕೇಳ್ತಿದ್ದಾರಲ್ಲ.

ಗಿರಾಕಿ : ಇಡ್ಲಿ,ಸಾಂಬಾರಿಗೆ ಒಂದು ಪ್ಲೇಟ್ಗೆ ಎಷ್ಟು ಹಣ?
ಮಾಣಿ : ಐದು ರೂಪಾಯಿ ಸರ್.
ಗಿರಾಕಿ : ಬರಿ ಇಡ್ಲಿಗೆ ಎಷ್ಟು?
ಮಾಣಿ : ಇಡ್ಲಿಗೆ ಮಾತ್ರ ಬೆಲೆ ಸಾಂಬಾರು ಪುಕ್ಕಟೆ.
ಗಿರಾಕಿ : ಹಾಗಾದರೆ ಎರಡು ಪ್ಲೇಟು ಸಾಂಬಾರನ್ನೇ ತಾ.