ಡಾಕ್ಟರ್ : ವೈರಲ್ ಫೀವರು ಇವತ್ತು ಬಿಟ್ಟಿದೆ.ವಾರಬೇಕು ಇದು ಪೂರ್ತಿ ಹೋಗೋಕೆ.
ರೋಗಿ : ಬಿಟ್ಟಿರೋದೇನ್ನೊ ನಿಜ. ಆದರೆ ಪಕ್ಕದಲ್ಲಿ ನನ್ನ ಹೆಂಡತಿ ಇದ್ದಳು ಡಾಕ್ಟರ್ ಅವಳ್ನ ಗಬಕ್ಕಂತ ಹಿಡ್ಕೊಂಡಿದೆ.
ಅವಳು : ನಿನ್ನ ಗಂಡ ಒಳ್ಳೇಯವನೇನೇ?
ಇವಳು : ಹೌದು ಕಣೆ,ತುಂಬಾ ಒಳ್ಳೆಯವರು
ಅವಳು : ಹೇಗೆ ಹೇಳ್ತೀಯಾ?
ಇವಳು : ಮದುವೆಯಾಗಿ ಹತ್ತು ವರ್ಷ ಆದ್ರೂ ನನ್ನ ಜೊತೆನೇ ಇದ್ದಾರೆ.ಒಂದು ಆಫೈರ್ ಕೂಡಾ ಇಟ್ಟುಕೊಂಡಿಲ್ಲ.
ಶಾಂತ : ನೀವು ಲಟನ್ನಿಗೇನ ಚಪಾತಿ ಲಟ್ಟಿಸೋಕೆ ಜಾಸ್ತಿ ಉಪಯೋಗಿಸುತ್ತಿರೋ ಬಟ್ಟೆ ಒಗೆಯೋಕೋ. ಉಪಯೋಗಿಸುತ್ತಿರೋ ಅಥವಾ ಪೂರಿ ಲಟ್ಟಿಸೋಕೋ
ಗೌರಿ : ಯಾವುದೂ ಅಲ್ಲ ನಮ್ಮೆ ಜಮಾನರನ್ನ ಹೆದರಿಸೋಕೆ.