ಮೋಹನ : (ಒಣಗಿದ ತರಕಾರಿ ಕಂಡು ಅಂಗಡಿಯವನ ಮೇಲೆ ರೇಗಿದ) ಬೇರೆ ಇಲ್ಲವೇನ್ರಿ? ಇದನ್ನು ದನ ತಿನ್ನೋಲ್ಲ ಗೊತ್ತಾ?
ಅಂಗಡಿಯವನು : ಓಹ್, ತಿಳೀತು ಸಾರ್, ನಿಮಗೆ ಬೇಕಿರೋ ಜೋಳದ ಕಡ್ಡಿಗಳು, ಹುಲ್ಲು ಪಕ್ಕದ ಬೀದೀಲಿ ಸಿಗುತ್ತದೆ ನೋಡಿ.
ರೋಗಿ : ನಿಮ್ಮತ್ರ ಔಷಧಿ ತಡ್ರೆಗೊಂಡ್ರೆ ನನ್ನ ಕಾಯಿಲೆ ವಾಸಿಯಾಗುತ್ತಾ?
ಡಾಕ್ಟರ್ : ನೋಡಿ, ಇಲ್ಲಿ ಮೂರು ವಾಸಿ ಇದೆ. ಒಂದು ಕಾಯಿಲೆ ‘ವಾಸಿ’ ಅದು ಆದ್ರೆ ನೀವು ಇನ್ನೂ ಹಲವು ಕಾಲ ಭೂಲೋಕವಾಸಿಯಾಗಿರ್ತೀರ ಇಲ್ದದ್ರೆ ಸ್ವರ್ಗ ವಾಸಯಾಗ್ತೀರ.
ಕುಡಿದ ಆಮಲಿನಲ್ಲಿ ಗಂಡ ಹೆಂಡತಿಗೆ ಹೇಳಿದ
ಗಂಡ : ಪ್ರಿಯೆ ನಾನೀಗ ಸ್ವರ್ಗದಲ್ಲಿದ್ದೇನೆ
ಹೆಂಡತಿ : ಸಾಧ್ಯವೇ ಇಲ್ಲ.
ಗಂಡ : ನಿಜಕ್ಕೂ ನಾನು ಸ್ವರ್ಗದಲ್ಲೇ ಇದ್ದೇನೆ
ಹೆಂಡತಿ : ಅದು ಹೇಗೆ ಸಾಧ್ಯ ನಾನು ನಿಮ್ಮ ಬಳಿ ಇರುವಾಗ?