ಅದೊಂದು ಆಹ್ವಾನ ಪತ್ರಿಕೆ. ರಾತ್ರಿ ಎಂಟಕ್ಕೆ ’BAJAN’ ಎಂದು ಇರಬೇಕಾದ ಜಾಗದಲ್ಲಿ
’BOJAN’ ಎಂದು ತಪ್ಪಾಗಿ ಆಚ್ಚಾಗಿಬಿಟ್ಟಿದೆ. ರಾತ್ರಿ ಎಂಟಕ್ಕೆ ಪ್ರವಾಹೋಪಾದಿಯಲ್ಲಿ ಜನಗಳು
ಬರುತ್ತಿರುವುದನ್ನು ಕಂಡು ವ್ಕವಸ್ಥಾಪಕರಿಗೆ ಮೂರ್ಛೆಯಾಗುವುದೊಂದು ತಪ್ಪಿದರೂ ಆದ ಪ್ರಮಾದ ಮಾತ್ರ ಕಹಿಯಾಗಿಯೇ ಇತ್ತು.
-*-*-*-*-*-*-*-*-*-*
ಬೆಂಗಳೂರಿನಲ್ಲಿ ಇಬ್ಬರು ತಮಿಳು ಮಾತಾಡುತ್ತಿದ್ದರೆ ಇಬ್ಬರೂ ತಮಿಳರು ಆಥವಾ ಒಬ್ಬ ತಮಿಳ, ಒಬ್ಬ ಕನ್ನಡಿಗ. ಇಬ್ಬರು ತೆಲುಗು ಮಾತಾಡುತ್ತಿದ್ದರೆ ಇಬ್ಬರೂ ತೆಲುಗರು ಆಥವಾ ಒಬ್ಬ ತೆಲುಗ, ಒಬ್ಬ ಕನ್ನಡಿಗ. ಇಬ್ಬರು ಹಿಂದಿ ಮಾತಾಡುತ್ತಿದ್ದರೆ ಇಬ್ಬರೂ ಉತ್ತರ ಭಾರತದವರು. ಇಲ್ಲವ ಒಬ್ಬ ಉತ್ತರದವ, ಒಬ್ಬ ಕನ್ನಡಿಗ. ಇಬ್ಬರು ಇಂಗ್ಲಿಷ್ ಮಾತನಾಡುತ್ತಿದ್ದರೆ ಇಬ್ಬರೂ ಕನ್ನಡಿಗರು! ಇಬ್ಬರೂ ಕನ್ನಡ ಮಾತನಾಡುತ್ತಿದ್ದರೆ ಅವರಂತೂ ಬೆಂಗಳೂರಿನವರಲ್ಲ!
***
ಒಬ್ಬ ತರುಣ ಲೇಖಕ ೧೦೦೦ ಪುಟಗಳಷ್ಟು ಕಾದಂಬರಿಯೊಂದನ್ನು ಬರೆದು ಆದಕ್ಕೆ ಸೂಕ್ತ
ತಲೆಬರಹವೊಂದನ್ನು ಸೂಚಿಸಲು ಪ್ರಸಿದ್ಧ ಲೇಖಕನ ಬಳಿ ತಂದುಕೊಟ್ಟ.
ಈತ ಪುಸ್ತಕಗಳ ಪುಟಗಳನ್ನು ತಿರುವಿಹಾಕುತ್ತಾ “ಇದರಲ್ಲಿ ಮದುವೆ ಮತ್ತು ದಿಬ್ಬಣದ
ಪ್ರಸ್ತಾಪವನ್ನೇನಾದರೂ ಬರೆದಿದ್ದೀಯಾ?” ಕೇಳಿದರು.
ತರುಣ ಲೇಖಕ: “ಅಂತಹ ಪ್ರಸ್ತಾಪವನ್ನು ಬರೆದಿಲ್ಲ” ಆಂದ.
ಪ್ರಸಿದ್ಧಲೇಖಕರು: “ಸರಿ ಹಾಗಾದರೆ ಈ ಕಾದಂಬರಿಗೆ ‘ಮದುವೆಯೂ ಇಲ್ಲ: ದಿಬ್ಬಣವೂ ಇಲ್ಲ’ ಎಂದು ಹೆಸರಿಡು. ಈ ಕಾದಂಬರಿಗೆ ಅದೇ ಸೂಕ್ತವಾದ ಹೆಸರು,” ಅಂದರು.