ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸುಬ್ಬ: ಆ ಗುಂಡನ್ನ ತೆಗೀಬೇಕೂ ಅಂದ್ರೆ ಈ ಬಾಂಬನ್ನು ಅವನ ಕಾರಿಗೆ ಫಿಕ್ಸ್ ಮಾಡ್ಲೆ ಬೇಕು.
ನಾಣಿ: ಮಾಡೋದಾದ್ರೆ ಬೇಗ ಮಾಡಿಬಿಡು.
ಸುಬ್ಬ: ಹೌದು, ಬಾಂಬ್ ಫಿಕ್ಸ್ ಮಾಡುವಾಗ ಅದು ಬ್ಲಾಸ್ಟ್ ಆದ್ರೆ?
ನಾಣಿ: ಅದಕ್ಕೆ ನೀನೇನು ಹೆದರಬೇಡ. ನನ್ನ ಹತ್ರ ಇನ್ನೂ ಎರಡು ಬಾಂಬುಗಳಿವೆ.

Join Our Whatsapp Group

ನಾಣಿ: ಸಾರ್, ಆರೋಗ್ಯವಾಗಿದ್ದೀರಾ?
ಬಾಸ್: ಲೇ, ಇವರನ್ನೆಲ್ಲಾ ಮೊದ್ಲು ಹೊರಗಟ್ಟು,
ನಾಣಿ: ಸಾರ್, ಅಂಥ ಕೆಲ್ಸ ನಾವೇನು ಮಾಡಿದ್ದೀ?
ಬಾಸ್: ನಿನ್ನೆ ನೀವು ಹೂಗುಚ್ಛ ಕೊಟ್ಟುಹೋದ್ರಲ್ಲ. ಅದ್ರಲ್ಲಿ ಏನು ಬರೆದಿಟ್ಟಿದ್ದೀ?
ನಾಣಿ: ಬೇಗನೆ ಗುಣ ಮುಖವಾಗಿ ಅಂತ ಬರೆದಿಟ್ಟಿದ್ವಿ,
ಬಾಸ್: ಸುಖಪ್ರಯಾಣ ಮಾಡಿ ಅಂತ ಇತ್ತು ಅದ್ರಲ್ಲಿ!

ಸುಬ್ಬ: ಲೋ ನಾಣಿ ಕುಡಿದದ್ದು ಸಾಕು ಏಳೋ.
ನಾಣಿ: ಇಲ್ಲಾ ಇನ್ನೂ ಕುಡೀಬೇಕು. ನಾನಿವತ್ತು ಎಷ್ಟು ಕುಡೀಬೇಕೂ ಅಂದ್ರೆ ಅಲ್ಲಿ ನಿಂತಿದಾರಲ್ಲ ಮೂರು ಹುಡುಗಿಯರು ಅವರು ಆರು ಹುಡುಗಿಯರಾಗಿ ಕಾಣೇಕು.
ಸುಬ್ಬ: ಲೋ ಬಾಯ್ಮುಳ್ಳೋಚ್ಕೋ ಸುಮ್ನೆ ಅಲ್ಲಿರೋರು ಮೂರು ಹುಡುಗಿಯರಲ್ಲ ಒಬ್ಬಳೇ ಹುಡುಗಿ.