ಆತ: ಎದುರಿಗೆ ಬರುತ್ತಿದ್ದವನನ್ನು ಮಾತಿಗೆ ಎಳೆದ “ನಮಸ್ಕಾರ ಸಾರ್ ಚೆನ್ನಾಗಿದ್ದೀರಾ?”
ಈತ: “ನಮಸ್ಯಾರ ಏನೋ ಹೀಗೆ ಇದ್ದೀನಿ. ಮನೆ ಹೋಗು ಅನ್ನುತ್ತೆ ಸ್ಮಶಾನ ಬಾ ಎನ್ನುತ್ತೆ. ಕಾಲ ತಳ್ತಾಯಿದ್ದೀನಿ”.
ಆತ: “ನನ್ನ ಗುರುತು ಸಿಕ್ಕಿತಾ ನಿಮಗೆ?”
ಈತ: “ಸಿಗದೆ ಏನಪ್ಪಾ?”
ಆತ: “ನಾನು ಯಾರು ಹೇಳಿ ನೋಡೋಣ?’
ಈತ: “ನೀನು ಇದರಲ್ಲಿ ಇದಾಗಿರಲಿಲ್ಲವೆ?’
ಆತ: “ಪರವಾಗಿಲ್ಲ ನಿಮ್ಮ ಜ್ಜಾಪಕಶಕ್ತಿ ಇನ್ನೂ ಚಿನ್ನಾಗಿಯೇ ಇದೆ!’
****
ಆತ ಗಿಣಿ ಮಾರಾಟ ಮಾಡುವ ವ್ಯಕ್ತಿ- ಅವನ ಬಳಿಗೆ ಬಂದ ಗಿರಾಕಿ ಗಿಣಿಗೆ ಬೆಲೆಯಷ್ಟು? ಎಂದು ಕೇಳಿದ “ಒಂದು ನೂರು ರೂಪಾಯಿಗಳು ಮಾತ್ರ” ಮಾರಾಟದವ ನುಡಿದ.
“ಏನು ಈ ಗಿಣಿಗೆ ನೂರು ರೂಪಾಯಿ ಬೆಲೆಯೇ?” ಕೇಳಿದ.
“ಅದನ್ನೇ ಕೇಳಿ ಬೇಕಾದರೆ”. ಮಾರಾಟದವ ನುಡಿದ.
“ನಿನ್ನ ಬೆಲೆ ನೂರು ರೂಪಾಯಿಯಂತೆ ಹೌದಾ ಗಿಣಿ?”
ತಕ್ಷಣವೇ ಗಿಣಿ ಹೇಳಿತು: “ಅದರಲ್ಲೇನು ಅನುಮಾನ?” ಖುಷಿಪಟ್ಟು ನೂರು ರೂಪಾಯಿ ಕೊಟ್ಟು ಗಿಣಿಯನ್ನು ಕೊಂಡು ದಾರಿಯಲ್ಲಿ ಬರುವಾಗ “ಅಲ್ಲಾ ಎಲ್ಲಾ ಬಿಟ್ಟು ನಿನಗೆ ನೂರು ರೂಪಾಯಿ ಕೊಟ್ಟಿನಲ್ಲಾ, ನಾನು ಎಂತಹದಡ್ಡ ಶಿಖಾಮಣಿ ಅಂತೀನಿ?”
ತಟ್ಟನೆ ಗಿಣಿ ಉತ್ತರಿಸಿತು: “ಅದರಲ್ಲೇನು ಅನುಮಾನ?”!
***
ಮನ್‌ಮೋಹನ್‌ಸಿಂಗ್ ಬುಶ್‌ರವರಿಗೆ ಹೇಳಿದರ೦ತೆ: “ನಾವು ಮುಂದಿನ ವರ್ಷ ಭಾರತೀಯರನ್ನು ಚಂದ್ರಯಾನಕ್ಕೆ ಕಳುಹಿಸಲಿದ್ದೇನೆ.”
ಬುಶ್: “ವಾವ್ ಎಷ್ಟು ಜನರನ್ನು?”
ಮ.ಮೋ.ಸಿಂಗ್: “ಒಟ್ಟು ೧೦೦ ಜನ ಅದರಲ್ಲಿ ೨೦ SC, ೨೭ OBC, ೧೮ ST, ೧೦ BC, ೮
Handicapped!”