ಶಿಕ್ಷಕ: ಎಲ್ಲದಕ್ಕಿಂತ ಹೆಚ್ಚು ಮತ್ತು (ನಿಶೆ) ಬರುವುದು ಯಾತರಲ್ಲಿ?
ನಾಣಿ: ಪುಸ್ತಕದಲ್ಲಿ ಸಾರ್.
ಶಿಕ್ಷಕ: ಅದು ಹೇಗೆ ಹೇಳ್ತಿಯಾ?
ನಾಣಿ: ನಾನು ಪುಸ್ತಕ ತೆರೆದು ಓದೋಕೆ ಶುರು ಮಾಡೋದೆ ತಡ ಕಣ್ಣು ಮುಟ್ಟೋ ಹಾಗಾಗುತ್ತೆ.
ಟೀಚರ್: ಯಾಕೋ ನಾಣಿ ಶಾಲೆಗೆ ತಡವಾಗಿ ಬಂದೆ? ಅದ್ದರಿ ಚಪ್ಪಲಿ ಏಕೆ ಹಾಕ್ಕೊಂಡು ಬಂದಿಲ್ಲ?
ನಾಣಿ: ನಮ್ಮಪ್ಪ ಅಮ್ಮ ಜಗಳ ಆಡ್ತಿದ್ರು ಟೀಚರ್, ಅದಕ್ಕೆ ಬರೀ ಕಾಲಲ್ಲಿ ಬಂದೆ.
ಟೀಚರ್: ಅವರು ಜಗಳವಾಡೋಕೂ ನೀನು ಬರೀ ಕಾಲಲ್ಲಿ ಬರೋಕೂ ಏನು ಸಂಬಂಧ?
ನಾಣಿ: ಏನ್ ಮಾಡ್ಲಿ ಟೀಚರ್, ನನ್ನ ಒಂದು ಚಪ್ಪಲಿ ಅಮ್ಮನ ಕೈಲಿತ್ತು ಮತ್ತೊಂದು ಚಪ್ಪಲಿ ಅಪ್ಪನ ಕೈಲಿತ್ತು.
ಸುಬ್ಬ: ನಾಣಿ, ನಿನಗೆ ಯಾರಾದ್ರು ಹುಡುಗಿಯರು ಫೋನ್ ಮಾಡಿದ್ರೆ ಏನನ್ನುತ್ತೆ?
ನಾಣಿ: ಆಹಾ! ಜೇನುತುಪ್ಪ ಸವಿದ ಹಾಗಾಗುತ್ತೆ.
ಸುಬ್ಬ: ಹುಡುಗಿ ಅಪ್ಪ ಫೋನ್ ಮಾಡಿದ್ರೆ?
ನಾಣಿ: ಜೇನು ಕಡಿದಂತಾಗುತ್ತೆ.
ಸುಬ್ಬ : ಕಲ್ಲನ್ನ ಕೆತ್ತಿದರೆ?
ನಾಣಿ : ಶಿಲ್ಪವಾಗುತ್ತೆ.
ಸುಬ್ಬ : ಕಲ್ಲನ್ನು ನಮ್ಮನ್ನು ಕೆತ್ತಿದರೆ?
ನಾಣಿ : ಕೊಲೆಯಾಗುತ್ತೆ.














