ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಿಕ್ಷಕ: ಅಲ್ಲೋ ನಾಣಿ, ಅವತ್ತು ತಲೇ ನೋವೂ ಅಂತ ಒಂದು ದಿನ ರಜೆ ಪಡೆದಿದ್ದೆ. ಇವತ್ತು ಕಾಲು ನೋವೂ ಅಂತ ಎರಡು ದಿನ ರಜಾ ತಗೊಂಡಿದ್ದೀಯಲ್ಲಾ ಏಕೆ?
ನಾಣಿ: ಏನ್ಮಾಡ್ಲಿ ಸಾರ್, ತಲೆ ಇರೋದು ಒಂದೆ, ಆದರೆ ಕಾಲು ಎರಡಿವೆಯಲ್ಲಾ.

Join Our Whatsapp Group

ನಾಣಿ: ಸುಬ್ಬ ಒಂದು ವಿಚಾರ ಹೇಳ್ತಿನಿ, ಅದಕ್ಕೆ ಸರಿಯಾಗಿ ಉತ್ತರ ಹೇಳ್ತಿಯಾ?
ಸುಬ್ಬ: ಆಯ್ತು ಅದೇನು ಕೇಳು.
ನಾಣಿ: ಒಂದು ನಾಯಿ ಒಂದು ಹೆಣ್ಣು ಬೆಕ್ಕನ್ನು ಪ್ರೀತಿಸಿತು. ಆದರೆ ನಾಯಿ ಮನೆಯವರು ಬೆಕ್ಕನ್ನು ಮದುವೆ ಮಾಡಿಕೊಳ್ಳಲು ತಿರಸ್ಕರಿಸಿದರು. ಏಕೆ?
ಸುಬ್ಬ: ನಂಗೊತ್ತಿಲ್ಲಪ್ಪ.
ನಾಣಿ: ಕಾರಣ ಏನು ಗೊತ್ತೇ? ಹುಡುಗೀಗೆ ಮೀಸೆ ಇದೇ ಅಂತ.

ಮಗ ಬೂಟು ಕೊಡಿಸೆಂದು ಅಪ್ಪನಿಗೆ ದುಂಬಾಲು ಬಿದ್ದಿದ್ದ. ಒಂದು ದಿನ ಅಂಗಡಿಗೆ ಹೋದರು. ಅಪ್ಪ ಅಲ್ಲಿಯೂ ಚಪ್ಪಲಿ ತೊಗೋ ಎಂದ. ಮಗನಿಗೆ ಸಿಟ್ಟು ಬಂದು, ಬೂಟು ಕೊಡಿಸುತ್ತೀಯೋ, ಚಪ್ಪಲಿ ತೆಗೆದುಕೊಳ್ಳಲೋ ಎಂದು ಜೋರಾಗಿ ಕೂಗಿದ. ಅಂಗಡಿಯಲ್ಲಿದ್ದವರೆಲ್ಲಾ ಇವರನ್ನೇ ನೋಡ ತೊಡಗಿದರು.