ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸುಬ್ಬ: ನಿಂಗೂ ನಿನ್ನ ಹೆಂಡ್ತಿಗೂ ಜಗಳವಾದ್ರೆ ಏನ್ಮಾಡ್ತೀಯ?
ನಾಣಿ: ನಾವು ಒಂದು ತೀರ್ಮಾನ ಮಾಡಿಕೊಂಡ್ಡಿದೀನಿ. ನಿನಗೆ ಸಿಟ್ಟು ಬಂದರೆ ಅವಳು ಅಡುಗೆ ಮನೆಗೆ ಹೋಗ್ಬೇಕು. ನನಗೆ ಸಿಟ್ಟು ಬಂದ್ರೆ ನಾನು ಪೇಟೆ ಕಡೆ ಹೋಗ್ಬೇಕು.
ಸುಬ್ಬ: ಇದು ತೀರ್ಮಾನವಾದ್ಮಲೆ ಜಗಳ ಆಡಲೇ ಇಲ್ಲಾ ಅನ್ನು.
ನಾಣಿ: ಜಗಳ ಹೇಗಾಗುತ್ತೆ? ನಾನು ಮನೆ ಸೇರೋದೇ ಇಲ್ವಲ್ಲಾ.

Join Our Whatsapp Group

ಆಟೋ ಡ್ರೈವರ್: ಸಾರ್ ಎಲ್ಲಿಗೆ?
ನಾಣಿ: ಗಾಂಧಿ ಬಜಾರ್‌ಗೆ ಮೀಟ‌ರ್ ಹಾಕು. ಹೆಚ್ಚಿಗೆ ದುಡ್ಡು ಕೇಳ್ಬೇಡ.
ಆಟೋ ಡ್ರೈವರ್: ಹತ್ತಿ ಸಾರ್. ನೋಡಿ ಮೀಟರ್ ಹಾಕಿದೀನಿ (ಸ್ವಲ್ಪ ದೂರ ಹೋದನಂತರ) ಸಾರ್, ಸಾರ್, ಗಾಡೀದು ಬ್ರೇಕ್ ಫೇಲಾಯ್ತು. ಈಗೇನು ಮಾಡೋಣ?

ನಾಣಿ: ಮೊದ್ಲು ಮೀಟರ್ ಆಫ್ ಮಾಡು ಸಾಕು.
ತಂದೆ: ನೀನು ಮುಂದೆ ಓದಿ ಏನಾಗ್ಬೇಕೂ ಅಂತ ಇದ್ದೀಯ?
ಮಗ: ನಾನು ಪಶುವೈದ್ಯನಾಗೇಕೂ ಅಂತಿದ್ದೇನೆ.
ಅಪ್ಪ: ಯಾಕೋ?
ಮಗ: ಪಶುಗಳು ಏನೇ ಹೆಚ್ಚು ಕಮ್ಮಿಯಾದ್ರೂ ದೂರೋದಿಲ್ಲ, ಧರಣಿ, ಸತ್ಯಾಗ್ರಹ ಮಾಡೋದಿಲ್ಲ, ಅದಕ್ಕೆ.