ನಾಣಿ: ಸುಬ್ಬಿ ನಾನು ನಿನ್ನ ಪ್ರೀತಿಸುತ್ತೇನೆ.
ಸುದ್ದಿ: ಪ್ರೀತಿಸುವಂತೆ, ಮೊದಲು ನಿನ್ನ ಸಂಬಳ ಎಷ್ಟೂ ಅನ್ನೋದನ್ನ ಹೇಳು?
ನಾಣಿ: ನನಗೆ ಸಂಬಳ ತಿಂಗಳಿಗೆ ಐದು ಸಾವಿರ ಬರುತ್ತೆ
ಸುಬ್ಬಿ: ನಿನ್ನ ತಿಂಗಳ ಸಂಬಳ ನನಗೆ ಒಂದು ತಿಂಗಳ ಸೋಪು ಶಾಂಪೂಗೆ ಸಾಕಾಗೊಲ್ಲ.
ನಾಣಿ: ಅಂದ್ರೆ ನೀನಷ್ಟು ಗಲೀಜಾ?
ಸುಬ್ಬ: ಲೋ ನಾಣಿ, ಹಣಕ್ಕಾಗಿ ನನಗೇಕೋ ಫೋನ್ ಮಾಡಿದೆ?
ನಾಣಿ: ಅದಕ್ಕೆ ಕಾರಣ ಇದೆ ಕೇಳು. ನೀರು ಕೊಡೂ ಅಂತ ದೇವರನ್ನ ಬೇಡಿಕೊಂಡೆ. ನದೀನೇ ಕೊಟ್ಟ, ಹೂವು ಕೇಳಿದೆ ಒಂದು ವೃಂದಾವನವನ್ನೇ ಕೊಟ್ಟ. ಮನೆ ಕೇಳಿದೆ ಒಂದು ಅರಮನೆಯನ್ನೇ ಕೊಟ್ಟ, ಹಣ ಕೇಳಿದೆ ಅದಕ್ಕೆ ನಿನ್ನ ನಂಬರ್ ಕೊಟ್ಟ.
ಗುಂಡ: ಸಾರ್ ತಮ್ಮಿಂದ ಒಂದು ಸಹಾಯವಾಗಬೇಕಿತ್ತು.
ನಾಣಿ: ನೋಡಯ್ಯ ನಾನು ಒಬ್ಬ ಸ್ಟಿಕ್ಸ್ ಆಫೀಸರ್. ಆಫೀಸ್ ವಿಚಾರ ಬಿಟ್ಟು ಬೇರೆ ಏನಾದ್ರೂ ಕೇಳು?
ಗುಂಡ: ನನಗೆ ಒಂದೈದು ದಿನ ರಜಾ ಬೇಕಾಗಿತ್ತು ಸರ್.
ನಾಣಿ: ಏನಂದೆ? ಐದು ದಿನ ರಜಾ…. ಏತಕ್ಕಾಗಿ?
ಗುಂಡ: ನನ್ನ ಮದುವೆ ಇದೆ ಸಾರ್.
ನಾಣಿ: ಐದು ದಿನ ಅಲ್ಲಾ ಒಂದು ದಿನ ರಜಾ ಕೊಡೋಕೆ ಆಗೊಲ್ಲ. ಅದಕ್ಕೆ ಬದಲಿ ವ್ಯವಸ್ಥೆ ಮಾಡೋ.