ಸುಬ್ಬ: ಲೋ ನಾಣೆ, ಈಗ ನಾವು ಹೋಗ್ತಾ ಇರೋದು ಯುದ್ಧ ಭೂಮಿಗೆ.
ನಾಣಿ: ಅದು ನಂಗೊತ್ತು ಕಣೋ.
ಸುಬ್ಬ: ಮತ್ತೇಕೆ ಮೈಗೆಲ್ಲಾ ಈ ಸೊಳ್ಳೆ ಪರದೆ ಸುಕ್ಕೊಂಡು ಬಂದಿದೀಯ?
ನಾಣಿ: ಯಾಕೇ ಅಂದ್ರೆ, ಈ ಸೊಳೆ ಪರದೆ ಒಳಗೆ ಸೊಳ್ಳೇನೇ ಹೋಗೋಕಾಗೊಲ್ಲ. ಅಂದ್ಮಲೆ ಗುಂಡು ಹೇಗೋ ಇದರೊಳಕ್ಕೆ ಹೋಗುತ್ತೆ?
ನಾಣಿ : ರೀ ಬೇರೆ ಪುಸ್ತಕ ಕೊಡಿ.
ಲೈಬ್ರರಿಯನ್: ಏಕೆ? ಈ ಪುಸ್ತಕ ಏನಾಗಿದೆ?’
ನಾಣಿ: ಇಲ್ಲಿ ಬರೀ ಪಾತ್ರಧಾರಿಗಳ ಹೆಸರೇ ಇದೆ, ಕತೇನೇ ಇಲ್ಲಾ,
ಲೈಬ್ರರಿಯನ್: ನೋಡಿ ಇನ್ನೊಂದು ಬಾರಿ ರಿಜಿಸ್ಟರ್ ಬುಕ್ ತಗೊಂಡು ಹೋದ್ರೆ ಕಾಲು ಮುರೀತೀನಿ.
ನಾಣಿ: ನನ್ನೇಕೆ ಹಿಡ್ಕೊಂಡು ಬಂದ್ರಿ?
ಕಳ್ಳ: ನೀನು ನಮ್ಮಾತ್ಮ ಕದ್ದು ಕೇಳಿಸ್ಕೊಂಡೆ/. ಇವನ ಕಿವಿ ಕತ್ತರಿಸಿಹಾಕಿ.
ನಾಣಿ: ಬೇಡಿ ನನ್ನ ಕಿವಿ ಕತ್ತರಿಸಬೇಡಿ. ನನ್ನ ಕಣ್ಣು ಕಾಣದಂತಾಗುತ್ತೆ.
ಕಳ್ಳ: ಏನಂದೇ? ನಿನ್ ಕಿವಿ ಕತ್ತರಿಸಿದರೆ ನಿನ್ನ ಕಣ್ಣು ಏಕೆ ಕಾಣೋದಿಲ್ಲಾ?
ನಾಣಿ: ಕನ್ನಡಕ ಇನ್ನೇನು ನಿಮ್ಮಪ್ಪನ ಕಿವಿಗೆ ಹಾಕ್ಲಾ?
Saval TV on YouTube